ಕರಾವಳಿ

ಕೃಷ್ಣಾಪುರ: ರಕ್ತದಾನ ಶಿಬಿರ

Pinterest LinkedIn Tumblr

ಮಂಗಳೂರು : ಜೆ ಸಿ ಐ ಗಣೇಶಪುರ ಹಾಗೂ ಧೂಮವತಿ ಫ್ರೆಂಡ್ಸ್ ಸರ್ಕಲ್ (ರಿ) ಕೃಷ್ಣಾಪುರ ಇವರ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಕೃಷ್ಣಾಪುರ 7ನೇ ಬ್ಲಾಕ್ ನ ಶ್ರೀ ಸರಳ ಧೂಮವತಿ ದೈವಸ್ಥಾನ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜೆ.ಸಿ.ಐ. ಗಣೇಶಪುರದ ಅಧ್ಯಕ್ಷ ಶರತ್ ಕುಮಾರ್ ವಹಿಸಿದ್ದರು. ಜೆ ಸಿ ಐ ವಲಯ ೧೫ ರ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಅಶ್ವಿನಿ ಐತಾಳ್ ಮುಖ್ಯ ಅತಿಥಿಗಳಾಗಿದ್ದರು.

ಶ್ರೀ ಸರಳ ಧೂಮವತಿ ದೈವಸ್ಥಾನದ ಅಧ್ಯಕ್ಷರಾದ ಗಿರೀಶ್ ಆರ್, ಧೂಮವತಿ ಫ್ರೆಂಡ್ಸ್ ಸರ್ಕಲ್ (ರಿ) ಕೃಷ್ಣಾಪುರದ ಅಧ್ಯಕ್ಷ ವಿಜಯ್ ಎಚ್.ಆರ್., ಕಾರ್ಯಾಧ್ಯಕ್ಷ ದೇವೇಂದ್ರ ಕೋಟ್ಯಾನ್ ಅತಿಥಿಗಳಾಗಿದ್ದರು. ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಮತ್ತು ರಕ್ತದಾನದ ಬಗ್ಗೆ ಇರುವ ಮೂಢನಂಬಿಕೆಗಳ ಬಗ್ಗೆ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇಲ್ಲಿನ ವೈದ್ಯೆ ಡಾ/ ಸೌಮ್ಯ ವಿವರಿಸಿದರು. ಜೆ.ಸಿ. ಚೇತನಾ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಜೇಸೀರೇಟ್ ಅಧ್ಯಕ್ಷೆ ಶುಭಾ ಶರತ್ ವಂದಿಸಿದರು. ಧೂಮವತಿ ಫ್ರೆಂಡ್ಸ್ ಸರ್ಕಲ್ (ರಿ) ಕೃಷ್ಣಾಪುರ ಹಾಗೂ ಜೆ.ಸಿ.ಐ. ಗಣೇಶಪುರದ ಸದಸ್ಯರು ಮತ್ತು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ರಕ್ತದಾನ ಮಾಡಿದರು.

Comments are closed.