ರಾಷ್ಟ್ರೀಯ

ಹೊಸವರ್ಷ ಪಾರ್ಟಿ ವೇಳೆ ಲಿಫ್ಟ್​ ಕುಸಿತ: ಖ್ಯಾತ ಉದ್ಯಮಿ ಸೇರಿದಂತೆ 6 ಮಂದಿ ದುರ್ಮರಣ

Pinterest LinkedIn Tumblr

ಇಂದೋರ್: ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಉತ್ಸಾಹ ಎಲ್ಲರಲ್ಲೂ ಇರುತ್ತದೆ. ಅದೇ ಉತ್ಸಾಹದಿಂದ ಗೆಳೆಯನ ಫಾರ್ಮ್​ಹೌಸ್​ಗೆ ಹೋಗಿ ಪಾರ್ಟಿ ಮಾಡುವಾಗ ಲಿಫ್ಟ್​ ಕುಸಿದ ಪರಿಣಾಮ 6 ಜನ ಸಾವನ್ನಪ್ಪಿರುವ ದುರಂತ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಉದ್ಯಮಿ ಪುನೀತ್ ಅಗರವಾಲ್ ಮನೆಯಲ್ಲಿ ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕಾಗಿ ಗೆಳೆಯರನ್ನು, ಕುಟುಂಬದವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಪಾರ್ಟಿಗೆ ಬಂದವರು ಲಿಫ್ಟ್​ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್​ ಕುಸಿದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಪಾರ್ಟಿಯ ಸಂಭ್ರಮದಲ್ಲಿದ್ದ ಫಾರ್ಮ್​ ಹೌಸ್​ನಲ್ಲಿ ಭಾರೀ ದುರಂತ ಸಂಭವಿಸಿದೆ.

ಪುನೀತ್ ಅಗರವಾಲ್ ಕುಟುಂಬದವರು ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್ ಕುಸಿದ ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ಇನ್ನು ಪುನೀತ್ ಅಗರವಾಲ್ ಪತ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ದುರಂತದಲ್ಲಿ ಪುನೀತ್ ಅಗರವಾಲ್ ಅವರ ಪುತ್ರಿ ಪಲಾಕ್, ಅಳಿಯ ಪಾಲ್ಕೇಶ್, ಮೂರು ವರ್ಷದ ಮೊಮ್ಮಗ ನವ್ ಮತ್ತು ಸಂಬಂಧಿಕರಾದ ಗೌರವ್ ಮತ್ತು ಅರ್ವೀರ್ ಮೃತಪಟ್ಟಿದ್ದಾರೆ.

Comments are closed.