ಕರಾವಳಿ

ಹೊಳಪು-2019 ಕ್ರೀಡಾಕೂಟ : ಮಹಿಳಾ ತ್ರೋಬಾಲ್ ವಿಭಾಗದಲ್ಲಿ ಪುತ್ತೂರು ತಾಲೂಕು ಪಂಚಾಯತ್‌ಗೆ ಪ್ರಶಸ್ತಿ

Pinterest LinkedIn Tumblr

ಮಂಗಳೂರು ಡಿಸೆಂಬರ್ 30 : ಡಾ. ಶಿವರಾಮ ಕಾರಂತ ಪ್ರತಿಷ್ಟಾನ(ರಿ) ಕೋಟ ಇವರ ಸಹಯೋಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಚಾಲಕರು ಇವರ ನೇತ್ರತ್ವದಲ್ಲಿ ಡಿಸೆಂಬರ್ 28 ರಂದು ವಿವೇಕ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಹೊಳಪು-2019 ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳಿಗೆ ನಡೆದ ಕ್ರೀಡಾ ಕೂಟದಲ್ಲಿ ಉಳ್ಳಾಲ ನಗರಸಭೆಯ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

ಮಹಿಳಾ ತ್ರೋಬಾಲ್ ವಿಭಾಗದಲ್ಲಿ ಪುತ್ತೂರು ತಾಲೂಕು ಪಂಚಾಯತ್, ಬೆಳ್ತಂಗಡಿ ತಾಲೂಕು ಪಂಚಾಯತ್, ದ.ಕ ಜಿಲ್ಲಾ ಪಂಚಾಯತ್ ತಂಡಗಳೊಂದಿಗೆ ಭಾಗವಹಿಸಿ ಫೈನಲ್ ಪಂದ್ಯದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಇವರೊಂದಿಗೆ 17 ಅಂಕಗಳ ಅಂತರದಲ್ಲಿ ಜಯಗಳಿಸಿದರು.

ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಮೂಡಬಿದ್ರೆ ಪುರಸಭೆ ಉಡುಪಿ ತಾಲೂಕು ಪಂಚಾಯತ್ ಹಾಗೂ ಸೋಮೇಶ್ವರ ಪುರಸಭೆಯ ತಂಡದೊಂದಿಗೆ ಸ್ಫರ್ಧಿಸಿ 2ನೇ ಸ್ಥಾನ ಗಳಿಸಿರುತ್ತದೆ.

ಸ್ಫರ್ಧೆಯಲ್ಲಿ ಜನಪ್ರತಿನಿಧಿಗಳಾದ ಮೊಹಮ್ಮದ್ ಮುಕ್ಕಚೇರಿ, ಬಾಜಿಲ್ ಡಿಸೋಜ, ಶಶಿಕಲಾ , ವೀಣಾ ಶಾಂತಿ ಡಿಸೋಜ, ನಮಿತಾ ಗಟ್ಟಿ, ಸ್ವಪ್ನಾ ಹರೀಶ್, ರೇಶ್ಮಾ ಜಗದೀಶ್, ಕು.ಗೀತಾಬಾಯಿ, ಕು ಭವಾನಿ, ಮಮತಾ ರಾಘವ ಸಿಬ್ಬಂದಿಗಳಾದ ಪಕೀರ ಮೂಲ್ಯ , ಶಾಜಿತ್, ನಾಗರಾಜ್ ತುಳಸಿದಾಸ್, ಚಂದ್ರಹಾಸ್ ಪ್ರದೀಪ್ ಮಜೀದ್ ರೇಣುಕಾ, ಶೋಭ , ನಳಿನಿ, ಕು. ಅನುಷಾ ಪೌರಕಾರ್ಮಿಕರಾದ ಭಾಗ್ಯಮ್ಮ, ಜ್ಯೋತಿ ಕೆಂಚಪ್ಪ ಗಜೇಂದ್ರ ಇವರುಗಳು ಭಾಗವಹಿಸಿದ್ದು ಹಾಗೂ ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ರಾಯಪ್ಪ ಇವರು ತಂಡದ ನೇತೃತ್ವ ವಹಿಸಿದ್ದರು.

Comments are closed.