ಕರಾವಳಿ

ಕೃಷ್ಣೈಕ್ಯರಾದ ಪೇಜಾವರ ಶ್ರೀಗಳು- ಶೋಕದಲ್ಲಿ ಭಕ್ತ ಸಾಗರ-ಅಜ್ಜರಕಾಡಿನಲ್ಲಿ ಅಂತಿಮ ದರ್ಶನ ವ್ಯವಸ್ಥೆ

Pinterest LinkedIn Tumblr

ಉಡುಪಿ: ಪೇಜಾವರ ಅಧೋಕ್ಷಜ ಮಠದ ಪೇಜಾವರ ಶ್ರೀಗಳು ಚಿಕಿತ್ಸೆ ಫಲಕಾರಿಯಾಗದೇ ದೈವಾಧೀನರಾದರು ಎಂದು ಅಧೀಕೃತವಾಗಿ ಘೋಷಿಸಲಾಯಿತು.

ಭಾನುವಾರ 9.30ಕ್ಕೆ ಅಧೋಕ್ಷಜ ಮಠದ ಆವರಣದಲ್ಲಿ ಉಡುಪಿ ಡಿಸಿ ಜಿ. ಜಗದೀಶ್, ಉಡುಪಿ ಶಾಸಕ ಕೆ. ರಘುಪತಿ ಭಟ್ ಸ್ವಾಮಿಗಳು ನಿಧನರಾದ ವಿಚಾರ ಘೋಷಿಸಿದರು.

ಶ್ರೀಗಳ ಅಂತಿಮ ದರ್ಶನವನ್ನು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಬೆಳೀಗ್ಗೆ 10 ರಿಂದ 1 ಗಂಟೆವರೆಗೆ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಹೆಲಿಕಾಪ್ಟರ್ ನಲ್ಲಿ ಬೆಂಗಳೂರು ಮೂಲ ಮಠಕ್ಕೆ ಒಯ್ಯಲಾಗುತ್ತದೆ.

Comments are closed.