ಕರಾವಳಿ

ಪೇಜಾವರ ಶ್ರೀಗಳ ಅಪೇಕ್ಷೆಯಂತೆ ವೆಂಟಿಲೇಟರ್ ಮೂಲಕ ಮಠದಲ್ಲೇ ಮುಂದಿನ ಚಿಕಿತ್ಸೆ- ಕಿರಿಯ ಶ್ರೀ

Pinterest LinkedIn Tumblr

ಉಡುಪಿ: ಗುರುಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಆಗಿಲ್ಲ ಎಂದು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಗತ್ಯ ಜೀವರಕ್ಷಕ ಸಾಧನಗಳ ಜೊತೆ ಪೇಜಾವರ ಶ್ರೀ ಗಳ ಅಂತಿಮ ಆಸೆಯಂತೆ ಶ್ರೀಗಳನ್ನು ನಾಳೆ ಮಠಕ್ಕೆ ಸ್ಥಳಾಂತರ ಮಾಡುತ್ತೇವೆ, ಅಲ್ಲಿಯೇ ಚಿಕಿತ್ಸೆ ನಡೆಸಲಾಗುತ್ತೆ ಎಂದು ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

(ಪೇಜಾವರ ಕಿರಿಯ ಯತಿ, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ )

ಕುಂದಾಪುರ ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿಗಳು ವೈದ್ಯರ ಬಳಿ ಮಾತನಾಡಿದ್ದಾರೆ. ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆ ಮಠದಲ್ಲೇ ಮಾಡಲಾಗುತ್ತದೆ. ಆಸ್ಪತ್ರೆಯವರ ಕೆಲ ಕಾರ್ಯವಿಧಾನಗಳು ಬಾಕಿಯಿದೆ, ತಯಾರಿ ನೋಡಿಕೊಂಡು ಮುಂದಿನ ಕ್ರಮ ಮಾಡುತ್ತೇವೆ. ನುರಿತ ವೈದ್ಯರು ಈಗಾಗಲೇ ಚಿಕಿತ್ಸೆ ನೀಡುತ್ತಿದ್ದಾರೆ. ಪೇಜಾವರ ಮಠಕ್ಕೆ ಸದ್ಯಕ್ಕೆ ಭಕ್ತರು ಭೇಟಿ ಮಾಡೋಡು ಬೇಡ ಎಂದು ಪೇಜಾವರ ಕಿರಿಯಶ್ರೀ ವಿನಂತಿಸಿದ್ದಾರೆ.

Comments are closed.