ಕರಾವಳಿ

ಬಜಾಲ್ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳಿಗೆ 4.39 ಕೋಟಿ ಅನುದಾನ ಬಿಡುಗಡೆ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್ ವಾರ್ಡಿನ ವಿವಿಧ ಕಾಮಗಾರಿಗಳಿಗೆ 4.39 ಕೋಟಿ ಅನುದಾನ ಬಿಡುಗಡೆ ಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಕಾಂಗ್ರೇಸ್ ಆಡಳಿತಾವಧಿ ಕೊನೆಗೊಂಡ ನಂತರ ವಿವಿಧ ಇಲಾಖೆಗಳಿಂದ ಈ ಅನುದಾನಗಳನ್ನು ಬಿಡುಗಡೆಗೊಳಿಸಲಾಗಿದೆ‌. ಅಲ್ಪ ಸಂಖ್ಯಾತ ಕಲ್ಯಾಣ ನಿಧಿಯಿಂದ 50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಜಯನಗರದಿಂದ ಜಲ್ಲಿಗುಡ್ಡೆಗೊ ಹೋಗುವ ಅಡ್ಡರಸ್ತೆ ಅಭಿವೃದ್ಧಿಗೆ 15 ಲಕ್ಷ, ಫೈಜಲ್ ನಗರ ಮುಖ್ಯರಸ್ತೆಯ ಬಳಿ ಚರಂಡಿ ತಡೆಗೋಡೆ ರಚನೆ ಕಾಮಗಾರಿಗೆ 10 ಲಕ್ಷ, ಅಜೀಜ್ ಹೋಟೆಲ್ ಬಳಿಯಿಂದ ಮುಂದಕ್ಕೆ ಸಾಗುವ ರಸ್ತೆ ಬದಿ ತಡೆಗೋಡೆ ಹಾಗೂ ಒಳ ಚರಂಡಿ ನಿರ್ಮಾಣಕ್ಕೆ 25 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ 1.5 ಕೋಟಿ ಅನುದಾನ ಒದಗಿಸಲಾಗಿದೆ. ಅದರಲ್ಲಿ ಜಲ್ಲಿಗುಡ್ಡೆ ಕೋರ್ದಬ್ಬು ದೈವಸ್ಥಾನದ ಬಳಿಯಿಂದ ಕಾನಕರಿಯ ಬಂಟ ಮಂದಿರದ ತನಕ ರಸ್ತೆ ಅಭಿವೃದ್ಧಿಗೆ 1 ಕೋಟಿ, ಜಯನಗರ ಕಲ್ಲುರ್ಟಿ ಸ್ಥಾನದ ಬಳಿಯಿಂದ ಬಜಾಲಿಗೆ ಜೋಡಣೆಯಾಗುವ ರಸ್ತೆ ಅಭಿವೃದ್ಧಿ ಹಾಗೂ ಕಾಂಕ್ರೀಟೀಕರಣ ಕಾಮಗಾರಿಗೆ 50 ಲಕ್ಷ ಅನುದಾನ ಬಿಡುಗಡೆಯಾಗಿದೆ.

ಮಳೆಹಾನಿ ಪರಿಹಾರ ನಿಧಿಯಿಂದ 37.50 ಲಕ್ಷ ಅನುದಾನ ನೀಡಲಾಗಿದ್ದು, ಜಯನಗರದಿಂದ ಪಡುಬೀಡು ಬೈಲಿಗೆ ಹೋಗುವ ಚರಂಡಿ ಅಭಿವೃದ್ಧಿಗೆ 18 ಲಕ್ಷ, ಕಲ್ಲಗುಡ್ಡೆ ಕಾಲೋನಿಯಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ 14.50 ಲಕ್ಷ, ಬಜಾಲ್ ಪಲ್ಲಕೆರೆ ಶಿವಮಂದಿರ ಹೋಗುವ ರಸ್ತೆ ಬದಿ ಕುಸಿದ ತಡೆಗೋಡೆ ದುರಸ್ತಿ 5 ಲಕ್ಷ ಮೀಸಲಿಡಲಾಗಿದೆ.

ಮುಖ್ಯಮಂತ್ರಿ ವಿಶೇಷ ನಿಧಿಯಿಂದ 1.41 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಆದರ್ಶನಗರ ಅಡ್ಡರಸ್ತೆಯ ಅಭಿವೃದ್ಧಿ ಕಾಮಗಾರಿಗೆ 2.50 ಲಕ್ಷ, ಜಯನಗರ ಅಡ್ಡರಸ್ತೆಯಿಂದ ಜಾರಕ್ಕೆ ಹೋಗುವ ರಸ್ತೆ ಅಭಿವೃದ್ಧಿ 5 ಲಕ್ಷ, ಜಯನಗರ ಮುಖ್ಯ ರಸ್ತೆಯ ಬಳಿ ಮಳೆನೀರಿನ ಚರಂಡಿ ಅಭಿವೃದ್ಧಿ ಕಾಮಗಾರಿ 4 ಲಕ್ಷ, ಬಜಾಲ್ ಬೀಡು ರಸ್ತೆಯ ಅಡ್ಡರಸ್ತೆ ಮತ್ತು ಚರಂಜಿ ಕಾಮಗಾರಿ 4.50 ಲಕ್ಷ, ಬಜಾಲ್ ಬೀಡಿನಿಂದ ಮುಂದಕ್ಕೆ ದೇವಸ್ಥಾನಕ್ಕೆ ತೆರಳುವ ಕಾಲುದಾರಿ ಅಭಿವೃದ್ಧಿ 1.5 ಲಕ್ಷ, ಬಜಾಲ್ ಕೋರ್ದಬ್ಬು ದೇವಸ್ಥಾನದ ಬಳಿ ಇರುವ ವೆಟ್ ವೆಲ್`ನ ಮುಂದಕ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿ 7. ಲಕ್ಷ, ಜಲ್ಲಿಗುಡ್ಡೆಯ ಬಳಿ ರಸ್ತೆಯ ತಡೆಗೋಡೆ ಮತ್ತು ಚರಂಡಿ ಕಾಮಗಾರಿಗೆ 6 ಲಕ್ಷ, ಬಜಾಲ್ ಕೈಡೇಲ್ ನಾಗಬನಕ್ಕೆ ತೆರಳುವ ರಸ್ತೆಯ ಬಳಿ ತಡೆಗೋಡೆ ಕಾಮಗಾರಿ 5 ಲಕ್ಷ,‌ ಆದರ್ಶನಗರ ಕಾಲುದಾರಿಯ ಬಳಿ ತಡಿಗೋಡೆ ರಚನೆ 5 ಲಕ್ಷ, ಸಿರಿಸೀಮೆ ನರ್ಸರಿಯ ಬದಿ ಕಾಲುದಾರಿ ಅಭಿವೃದ್ಧಿ 7 ಲಕ್ಷ, ಬಜಾಲ್ ನಂತೂರು ಶಾಲೆಯ ಬಳಿಯಿಂದ ಉಲ್ಲಾಸನಗರಕ್ಕೆ ಹೋಗುವ ರಸ್ತೆ ಕಾಂಕ್ರೀಟೀಕರಣ,ತಡೆಗೋಡೆ ಹಾಗೂ ಒಳಚರಂಡಿ ಕಾಮಗಾರಿ 20 ಲಕ್ಷ, ಬಜಾಲ್ ಅಡ್ಡ ರಸ್ತೆ ಅಭಿವೃದ್ಧಿ 6 ಲಕ್ಷ, ಬಜಾಲ್ ಅಡ್ಡ ರಸ್ತೆಯ ಬಳಿ ಅಭಿವೃದ್ಧಿ ಕಾಮಗಾರಿ 6 ಲಕ್ಷ, ಬಜಾಲ್ ಬಳಿ ಕಾಲುದಾರಿ ಅಭಿವೃದ್ಧಿ ಕಾಮಗಾರಿ 5 ಲಕ್ಷ, ಬಜಾಲ್ ಬೀಡು ಮನೆಗೆ ತೆರಳುವ ಕಾಲುದಾರಿ ಹಾಗೂ ಒಳ ಚರಂಡಿ ರಚನೆ 8 ಲಕ್ಷ, ಜಯನಗರ ಬಳಿ ಕಾಲುದಾರಿ ಅಭಿವೃದ್ಧಿ 8 ಲಕ್ಷ, ಆದರ್ಶನಗರದಲ್ಲಿ ಮನೆಗೆ ಹೋಗುವ ಕಾಲು ದಾರಿಯನ್ನು ಕಾಂಕ್ರೀಟೀಕರಣಗೊಳಿಸುವ ಕಾಮಗಾರಿ 20 ಲಕ್ಷ, ಬಜಾಲ್ ಬಳಿ ಕಾಲುದಾರಿ ಅಭಿವೃದ್ಧಿ 8 ಲಕ್ಷ, ಕಲ್ಲುರ್ಟಿ ಸ್ಥಾನದ ವರೆಗೆ ಕಾಲುದಾರಿ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿ 8 ಲಕ್ಷ, ಆದರ್ಶನಗರದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ 2 ಲಕ್ಷ, ಪಲ್ಲಕೆರೆ ರಸ್ತೆಯಲ್ಲಿ ತಡೆಗೋಡೆ ರಚನೆ 3.10 ಲಕ್ಷ ಅನುದಾನ ಮೀಸಲಿಡಲಾಗಿದೆ. ಹಾಗೂ ಶೀಘ್ರವೇ ಈ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.

ಕೇಂದ್ರ ಸರಕಾರದ 14ನೇ ಹಣಕಾಸು ವ್ಯವಸ್ಥೆ ಅನುದಾನದಲ್ಲಿ 15 ಲಕ್ಷ ಬಿಡುಗಡೆಯಾಗಿದ್ದು ಬಜಾಲ್ ಕಲ್ಲುರ್ಟಿ ದೈವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೀಸಲಿಡಲಾಗಿದೆ.

ಮಂಗಳೂರು ನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ 45.85 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು, ಅದರಲ್ಲಿ ಫೈಸಲ್ ನಗರದ ಬಳಿ ತಡೆಗೋಡೆ ದುರಸ್ತಿ ಕಾಮಗಾರಿ 2.90 ಲಕ್ಷ, ಫೈಸಲ್ ನಗರ ಅಡ್ಡರಸ್ತೆಯ ಬಳಿ ತಡೆಗೋಡೆ ದುರಸ್ತಿ ಕಾಮಗಾರಿ 2.50 ಲಕ್ಷ, ಪಲ್ಲಕೆರೆ ರಸ್ತೆಯಲ್ಲಿ ಚರಂಡಿ ರಚನೆ ಕಾಮಗಾರಿ 5 ಲಕ್ಷ, ಬಜಾಲ್ ಪಡ್ಪು ಅಡ್ಡರಸ್ತೆಯ ಬಳಿ ತಡೆಗೋಡೆ ರಚನೆ ಕಾಮಗಾರಿ 3.20 ಲಕ್ಷ, ಬಜಾಲ್ ಪಡ್ಪು ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಬಳಿ ಇಂಟರ್ ಲಾಕ್ ಬಿಲ್ಲೆ ಅಳವಡಿಕೆ ಕಾಮಗಾರಿ 7.50 ಲಕ್ಷ, ಫೈಸಲ್ ನಗರ ಅಡ್ಡ ರಸ್ತೆಯಲ್ಲಿ ತಡೆಗೋಡೆ ದುರಸ್ತಿ ಕಾಮಗಾರಿ 5 ಲಕ್ಷ, ಪಲ್ಲಕೆರೆ ಶಿವಮಂದಿರ ರಸ್ತೆಯಲ್ಲಿ ಕಾಲುದಾರಿ ದುರಸ್ತಿ 4.75 ಲಕ್ಷ, ಪಲ್ಲಕೆರೆ ಶಿವಮಂದಿರ ರಸ್ತೆಯಲ್ಲಿ ಬದಿಗೋಡೆ ದುರಸ್ತಿ ಕಾಮಗಾರಿ 5 ಲಕ್ಷ, ಪಲ್ಲಕೆರೆ ಶಿವಮಂದಿರ ರಸ್ತೆ ದುರಸ್ತಿ ಕಾಮಗಾರಿ 5 ಲಕ್ಷ, ಬಜಾಲ್ ಪಕಲಡ್ಕ ಮುಖ್ಯ ರಸ್ತೆಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರೆಗೆ ಕುಡಿಯುವ ನೀರು ಪೂರೈಸಲು 90ಮಿಮಿ ವ್ಯಾಸದ ಹೆ.ಡಿ.ಪಿ.ಇ ಕೊಳವೆ ಅಳವಡಿಕೆ ಕಾಮಗಾರಿಗೆ 5 ಲಕ್ಷ ಒದಗಿಸಲಾಗಿದೆ ಎಂದು ಕಾಮತ್ ತಿಳಿಸಿದ್ದಾರೆ‌.

Comments are closed.