ಕರಾವಳಿ

ಸೂರ್ಯಗ್ರಹಣ : ದೇವಸ್ಥಾನಗಳಲ್ಲಿ ವಿಶೇಷ ಪೂಜೆ – ಮಸೀದಿಗಳಲ್ಲಿ ಸೂರ್ಯಗ್ರಹಣ ನಮಾಝ್

Pinterest LinkedIn Tumblr

ಮಂಗಳೂರು, ಡಿಸೆಂಬರ್.26 : ಕಂಕಣ ಸೂರ್ಯಗ್ರಹಣದ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಇಂದು ಸೂರ್ಯಗ್ರಹಣ ನಮಾಝ್ ಮಾಡಲಾಯಿತು. ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಸೀದಿಗಳಲ್ಲಿ ಗ್ರಹಣ ಸಂಬಂಧ ವಿಶೇಷ ನಮಾಜ್ ನಡೆಯಿತು. ನಗರದ ಬಂದರ್ ಕೇಂದ್ರ ಜುಮಾ ಮಸೀದಿಯಲ್ಲ್ಲಿ ಬೆಳಗ್ಗೆ 9 ಗಂಟೆಗೆ ನಡೆದ ನಮಾಝ್ ಗೆ ಖತೀಬ್ ಸ್ವದಕತುಲ್ಲಾಹ್ ಫೈಝಿ ನೇತೃತ್ವ ನೀಡಿದರು. ಉಳಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಮಸೀದಿಗಳಲ್ಲಿ ನಮಾಝ್ ಮಾಡಲಾಯಿತು.

ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆ ಪೂಜೆ ಸ್ಥಗಿತ : ಗ್ರಹಣ ಮೋಕ್ಷದ ಬಳಿಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಸೂರ್ಯಗ್ರಹಣ ಪ್ರಯುಕ್ತ ಮಂಗಳೂರಿನ ವಿವಿಧ ದೇವಾಲಯಗಳಲ್ಲಿ ಪೂಜೆ ಸ್ಥಗಿತ, ಕದ್ರಿ ದೇವಸ್ಥಾನದಲ್ಲಿ ಭಜನೆ, ವಿಷ್ಣು ಸಹಸ್ರನಾಮ, ಗಣಪತಿ ಸ್ತೋತ್ರ, ರುದ್ರ ಪಠಣ ನಡೆಯಿತು.ಗ್ರಹಣ ಮೋಕ್ಷದ ಬಳಿಕ ನಾಡಿನಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಹೋಮ ಹವನಗಳು ನಡೆದವು.

Comments are closed.