ಕರಾವಳಿ

ಕುಂದಾಪುರ ಫ್ಲೈ ಓವರ್ ಕಾಮಗಾರಿ‌ ಶೀಘ್ರ ಮುಕ್ತಾಯಕ್ಕೆ ಒತ್ತಾಯಿಸಿ ಪತ್ರ ಚಳುವಳಿ

Pinterest LinkedIn Tumblr

ಬೆಂಗಳೂರು: ಬಹುಶಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಜನತೆಗೆ ಫ್ಲೈ ಓವರ್ ಮೇಲಿನ ಓಡಾಟ ಗಗನ ಕುಸುಮ ಎಂದೇ ಹೇಳಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಪಂಪ್’ವೆಲ್ ಕಾಮಗಾರಿ ಹೇಗೆ ದಶಕಗಳಿಂದ ಬಾಕಿ ಇದೆಯೋ, ಇತ್ತ ಉಡುಪಿ ಜಿಲ್ಲೆ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಮತ್ತು ಫ್ಲೈ ಓವರ್ ಕಾಮಗಾರಿಯೂ ಕೂಡ. ಕಳೆದ 10 ವರ್ಷಗಳಿಂದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಶಾಸ್ತ್ರಿ ಸರ್ಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66ಗೆ ಪ್ಲೈಓವರ್ ಕಾಮಗಾರಿ ಕೆಲಸ ನಡೆಯುತ್ತಿದ್ದು,ಇನ್ನು ಪೂರ್ಣಗೊಂಡಿಲ್ಲ. ಹಿನ್ನೆಲೆಯಲ್ಲಿ ಇಂದು(ಡಿ.22 ಭಾನುವಾರ) ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಟೀಂ ಕುಂದಾಪುರಿಯನ್ಸ್ ಸಂಘಟನೆ ಪತ್ರ ಚಳವಳಿ ನಡೆಸಿತು.

 

ಯಾರಿಗೆಲ್ಲಾ ಪತ್ರ…?
ಉಡುಪಿ ಜಿಲ್ಲಾಧಿಕಾರಿಗಳು, ಉಡುಪಿ ಭಾಗದ ಶಾಸಕರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದರು ಸೇರಿದಂತೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು, ಕೇಂದ್ರ ನಾಯಕರು ಮತ್ತು ಪ್ರಧಾನ ಮಂತ್ರಿಗಳಿಗೂ ಪತ್ರ ಕಳುಹಿಸಲಾಯಿತು. ಜೊತೆಗೆ ಕಾಮಗಾರಿ ವಹಿಸಿಕೊಂಡ ನವಯುಗ ಕಂಪೆನಿಗೂ ಪತ್ರ ಕಳುಹಿಸಲಾಗಿದೆ. ಈ ಮೂಲಕ ಕಾಮಗಾರಿಯನ್ನ ಶೀಘ್ರದಲ್ಲೇ ಮುಕ್ತಾಯಗೊಳಿಸಬೇಕೆಂದು ಮನವಿ ಸಲ್ಲಿಸಲಾಯಿತು. ಸಿಲಿಕಾನ್ ಸಿಟಿಯಲ್ಲಿದ್ದು, ತಮ್ಮೂರಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಈ ವಿನೂತನ ಕಾರ್ಯಕ್ರಮದಲ್ಲಿ ಟೀಂ ಕುಂದಾಪುರಿಯನ್ಸ್ ತಂಡದ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.

ಕಾಮಗಾರಿ ಶೀಘ್ರ ಪೂರ್ಣಕ್ಕೆ ಒತ್ತಾಯ….
ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ಫ್ಲೈ ಓವರ್ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇದರಿಂದ ವಾಹನ ಸವಾರರಿಗೆ ಅಡಚಣೆ ಉಂಟಾಗಿ ಅಪಘಾತಗಳು ಸಂಭವಿಸುತ್ತಿದೆ.ಅಲ್ಲದೇ ಸ್ಥಳದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ ಚರಂಡಿ ನೀರು ರಸ್ತೆ ಮೇಲೆ ನೀರು ಹರಿಯುತ್ತಿದೆ.ಅಲ್ಲದೇ ಹಲವು ವರ್ಷಗಳಿಂದ ಪದೇ ಕಾಮಗಾರಿ ಮುಕ್ತಾಯದ ಅವಧಿಯನ್ನು ಮುಂದೂಡಲಾಗುತ್ತಿದೆ.ಕಾಮಗಾರಿ ಗುತ್ತಿಗೆ ತೆಗೆದುಕೊಂಡ ನವಯುಗ ಪ್ರೈವೇಟ್ ಲಿಮಿಟೆಡ್ ಕಂಪನಿ ಇನ್ನು 40% ರಷ್ಟು ಪ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಬಾಕಿಯಿದ್ದು, ಇದೇ ರೀತಿ ಕೆಲಸ ಮಂದಗತಿಯಲ್ಲಿ ಸಾಗಿದರೆ ಕಾಮಗಾರಿ ಪೂರ್ಣಗೊಳಿಸಲು ಇನ್ನು ಕೆಲವು ಕೆಲವು ವರ್ಷ ಬೇಕಾಗಬಹುದು. ಕಾಮಗಾರಿ ವಿಳಂಬದಿಂದ ಸ್ಥಳೀಯರಿಗೆ ಹಲವಾರು ವಿಧಗಳಿಂದ ಸಮಸ್ಯೆಗಳಾಗುತ್ತಿದೆ.ಹೀಗಾಗಿ ಪತ್ರ ಚಳುವಳಿ ‌ಮೂಲಕ ಫ್ಲೈಓವರ್ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಲು ಒತ್ತಾಯಿಸಲಾಯಿತು.

Comments are closed.