ಕರಾವಳಿ

ಮಣಿಪಾಲಕ್ಕೆ ಸಿಎಂ ಬಿ.ಎಸ್.ವೈ ಭೇಟಿ- ಶ್ರೀಗಳ ಆರೋಗ್ಯ ಸುಧಾರಿಸಿದೆಯೆಂದು ವೈದ್ಯರು ಹೇಳಿದ್ದಾರೆ: ಸಿಎಂ

Pinterest LinkedIn Tumblr

ಉಡುಪಿ: ಪೇಜಾವರ ಶ್ರೀ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪೇಜಾವರ ಶ್ರೀ ಗುಣಮುಖರಾಗಲು ಪ್ರಾರ್ಥಿಸಬೇಕು ಎಂದು ಮನವಿ ಮಾಡಿದ್ದಾರೆ‌.

ನಿನ್ನೆಗೆ ಹೋಲಿಸಿದರೇ ಶ್ರೀಗಳ ಆರೋಗ್ಯ ಇಂದು ಸುಧಾರಣೆ ಆಗಿದೆ ಅವರು ಗುಣಮುಖರಾಗಿ ಬಂದು ಪೂಜೆ ಮಾಡಲಿ. ತಜ್ಞ ವೈದ್ಯರು ಪ್ರಯತ್ನ ಮಾಡಿದ್ದು ಶ್ರೀಗಳು ಕಣ್ಣು ಬಿಡುತ್ತಿದ್ದಾರೆ.ಸೋಂಕು ಆಗಬಾರದೆಂದು ಕಟ್ಟೆಚ್ಚರ ವಹಿಸಲಾಗಿದೆ.

ರಾಮಮಂದಿರ ಹೋರಾಟ ನೆನಪಿಸಿದ ಸಿಎಂ…
ಸ್ವಾಮೀಜಿ ಜೊತೆ ಅಂದು 16 ಜನ ಇದ್ದೆವು.16 ಜನರ ಪೈಕಿ ನಾನು ಒಬ್ಬನಾಗಿದ್ದೆ. ಇದೀಗಾ ರಾಮಮಂದಿರ ಕಟ್ಟುವ ಸುಸಂದರ್ಭ ಮಂದಿರ ನಿರ್ಮಾಣವು ಅವರ ಮುಂದಾಳತ್ವದಲ್ಲಿ ಆಗಬೇಕು. ಅವರು ಆರೋಗ್ಯವಾಗಿ ಬದುಕಿರಬೇಕು. ಸ್ವತಂತ್ರ್ಯ ಭಾರತದಲ್ಲಿ ಮತ್ತೊಬ್ಬ ಇವರಷ್ಟು ಓಡಾಟ ಮಾಡುತ್ತಿಲ್ಲ. ಈ ವಯಸ್ಸಿನಲ್ಲಿ ಓಡಾಟ ಕಡಿಮೆ ಮಾಡಲು ನೂರಾರು ಬಾರಿ ಹೇಳಿದ್ದೆ. ಆದರೆ ಅವರಿಗೆ ವಯೋ ಸಹಜ ಸಮಸ್ಯೆ ಕಾಡುತ್ತಿದೆ ಎಂದರು.

ಸ್ವಾಮೀಜಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು
ಈಗಿರುವ ಆರೋಗ್ಯ ಸಮಸ್ಯೆಯನ್ನು ದಾಟಿ ಬರಲಿ
ವೈದ್ಯರು ಎರಡು ದಿನಗಳಲ್ಲಿ ಆರೋಗ್ಯ ಸುಧಾರಣೆ ಆಗುವ ಭರವಸೆ ನೀಡಿದ್ದಾರೆಂದರು.ಮೋದಿ ಅಮಿತ್ ಶಾ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ ಎಂದರು.

ಶ್ರೀಗಳ ಭೇಟಿ ಬಳಿಕ ಮಣಿಪಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು ಈ‌ ಸಂದರ್ಭ ಗೃಹಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರಿದ್ದರು.

Comments are closed.