ಕರಾವಳಿ

ಭಾರತ್ ಬಂದ್ ಕರೆ ಹಿನ್ನೆಲೆ- ಉಡುಪಿ ಜಿಲ್ಲಾದ್ಯಂತ ನಾಳೆಯಿಂದ 3 ದಿನ 144 ಸೆಕ್ಷನ್ ಜಾರಿ

Pinterest LinkedIn Tumblr

ಉಡುಪಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ಅಖಿಲ ಭಾರತ್ ಬಂದ್ ಮಾಡುವ ಕರೆಕೊಟ್ಟಿದ್ದು ಈ ಹಿನ್ನೆಲೆ ಉಡುಪಿ ಜಿಲ್ಲೆಯ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ, ಪ್ರತಿಭಟನೆ, ಕಾರ್ಯಕ್ರಮ ನಡೆಸಿದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಭಂಗ ಉಂಟಾಗುವ ಸಾಧ್ಯತೆಯಿರುವ ಕಾರಣ ಉಡುಪಿ ಜಿಲ್ಲಾದ್ಯಂತ ಡಿ.19 ಬೆಳಿಗ್ಗೆ 6 ಗಂಟೆಯಿಂದ ಡಿ. 21 ರಾತ್ರಿ ೧೧ ಗಂಟೆವರೆಗೆ144 ಸೆಕ್ಷನ್ ಅನ್ವಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಮಾಡಿದ್ದಾರೆ.

ಈ ಆದೇಶವು ಹೀಗಿದ್ದು ಸಾರ್ವಜನಿಕರು ಪಾಲನೆ ಮಾಡಬೇಕಿದೆ..

Comments are closed.