ಕರಾವಳಿ

ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಬರ್ಟ್ ಮಡಿಕೇರಿಗೆ ವರ್ಗಾವಣೆ

Pinterest LinkedIn Tumblr

ಕುಂದಾಪುರ: ಇಲ್ಲಿನ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ (ಶಸ್ತ್ರಚಿಕಿತ್ಸಕ) ಡಾ.ರಾಬರ್ಟ್ ರೆಬೆಲ್ಲೋ ಅವರ ಮಡಿಕೇರಿ ಚರಂಬಾಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣ ಅನುಷ್ಟಾನಕ್ಕೆ ಬರುವಂತೆ ವರ್ಗಾವಣೆ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಎನ್. ಲಕ್ಷ್ಮಣ ಆದೇಶ ಮಾಡಿದ್ದಾರೆ.

ಕುಂದಾಪುರ ತಾಲೂಕು ಅಸ್ಪತ್ರೆಗೆ ಮುಂದಿನ ಆದೇಶ ಬರುವ ತನಕ ಸಾಮಾನ್ಯ ಶಸ್ತ್ರ ಚಿಕಿತ್ಸಕ ಡಾ.ಉದಯಶಂರ್ ಅವರನ್ನು ಪ್ರಭಾರ ವೈದ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಕರ್ತವ್ಯ ದುರ್ಬಳಕೆ ಹಾಗೂ ದುರ್ನಡತೆ ದೂರಿನ ಹಿನ್ನೆಲೆ ಡಾ.ರಾಬರ್ಟ್ ರೆಬೆಲ್ಲೋ ಎತ್ತಂಗಡಿ ಮಾಡಿದ್ದು, ಹಿಂದೆ ಆರೋಗ್ಯ ಸಚಿವರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಸ್ಥಾನದಿಂದ ಬಿಡುಗಡೆ ಮಾಡಿದ್ದು, ಕೆ.ಎ.ಟಿ. ಮೊರೆಹೋದ ಅವರು ಅಮಾನತು ಆದೇಶಕ್ಕೆ ಡಾ.ರಾಬರ್ಟ್ ರೆಬೆಲ್ಲೋ ತಡೆ ತಂದಿದ್ದರು. ಸದ್ಯ ಪ್ರಕರಣ ಕೆ.ಎ.ಟಿಯಲ್ಲಿದ್ದು ಈ ಸಮಯದಲ್ಲಿ ವರ್ಗಾವಣೆ ಸಾಧ್ಯವೇ ಎಂಬ ಗೊಂದಲವೂ ಮೂಡಿದೆ.

Comments are closed.