ಕರಾವಳಿ

150ನೇ ವರ್ಷದ ದೀಪಾರಾಧನೆ : ಮಣ್ಣಗುಡ್ಡೆ ಗುರ್ಜಿ ಗುರ್ಜಿ ಮಹೋತ್ಸವ ಸಂಪನ್ನ

Pinterest LinkedIn Tumblr

ಮಂಗಳೂರು, ನವೆಂಬರ್,25 : ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಶರವು ಶ್ರೀ ಮಹಾಗಣಪತಿ ದೇವರ 150ನೇ ವರ್ಷದ ದೀಪಾರಾಧನೆ ಮಣ್ಣಗುಡ್ಡೆ ಗುರ್ಜಿ ಮಹೋತ್ಸವವು ರವಿವಾರ ಸಂಜೆ ಸಂಪನ್ನಗೊಂಡಿತ್ತು.

ಮಧ್ಯರಾತ್ರಿಯವರೆಗೂ ನಡೆದ ಶ್ರೀ ಮಹಾಗಣಪತಿ ದೇವರ ದೀಪಾರಾಧನಾ ಮಹೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಇದೇ ವೇಳೆ ಬಳ್ಲಾಲ್‌ಭಾಗ್ ವೃತದಲ್ಲಿ ಬಳ್ಳಾಲ್‌ಭಾಗ್ ಗುರ್ಜಿ ಸೇವಾ ಸಮಿತಿ ಅಶ್ರಯದಲ್ಲಿ ಗುರ್ಜಿ ಮಹೋತ್ಸವ ನಡೆಯಿತು. ಸಮಿತಿಯ ಪದಾಧಿಕಾರಿಗಳು, ಉದ್ಯಮಿಗಳು, ರಾಜಕೀಯ ನೇತಾರರು ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments are closed.