ಕರಾವಳಿ

ಸಂಘ ಪರಿವಾರದ ಕಟ್ಟಾಳು, ಬಿಜೆಪಿಯ ನಿಷ್ಟ ಶಂಕರ್ ಅಂಕದಕಟ್ಟೆ ಕುಂದಾಪುರ ಬಿಜೆಪಿ ನೂತನ ಸಾರಥಿ

Pinterest LinkedIn Tumblr

ಕುಂದಾಪುರ: ಕುಂದಾಪುರದ ಬಿಜೆಪಿಗೆ ನೂತನ ಸಾರಥಿಯಾಗಿ ಶಂಕರ್ ಅಂಕದಕಟ್ಟೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕುಂದಾಪುರದಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು ಶಂಕರ್ ಅಂಕದಕಟ್ಟೆ ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧ ಆಯ್ಕೆ ನಡೆದಿದೆ. ಈ ಪ್ರಕ್ರಿಯೆಯ ವಿವರವನ್ನು ಜಿಲ್ಲಾ ಕೇಂದ್ರಕ್ಕೆ ಕಳಿಸಲಿದ್ದು ಅಲ್ಲಿನ ಪ್ರಕ್ರಿಯೆ ಬಳಿಕ ಕುಂದಾಪುರ ಬಿಜೆಪಿ ನೂತನ ಕ್ಷೇತ್ರಾಧ್ಯಕ್ಷರಾಗಿ ಶಂಕರ ಅಂಕದಕಟ್ಟೆ ಅಧೀಕೃತವಾಗಿ ಹುದ್ದೆ ಅಲಂಕರಿಸಲಿದ್ದಾರೆ.

ಶಂಕರ ಅಂಕದಕಟ್ಟೆ ಯಾರು?
ಹಿಂದೂ ಜಾಗರಣ ವೇದಿಕೆಯಲ್ಲಿ ಹಲವು ವರ್ಷಗಳಿಂದ ಕಾರ್ಯಕರ್ತನಾಗಿದ್ದ ಶಂಕರ್ ಅಂಕದಕಟ್ಟೆ ಕಳೆದ ಕೆಲ ವರ್ಷಗಳೀಂದೀಚೆಗೆ ಬಿಜೆಪಿ ಪಕ್ಷದಲ್ಲಿ ತೊಡಗಿಸಿಕೊಂಡು ಸಕ್ರೀಯ ಕಾರ್ಯಕರ್ತರಾದರು. ಒಂದು ಅವಧಿಗೆ ಕುಂದಾಪುರ ಕ್ಷೇತ್ರ ಯುವಮೋರ್ಚಾ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಸದ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಿಸುತ್ತಿದ್ದಾರೆ.

ವಂದೇ ಮಾತರಂ ಫೇಮಸ್!
ಶಂಕರ್ ಅಂಕದಕಟ್ಟೆ ಪಕ್ಷ ಹಾಗೂ ಸಂಘಟನೆಯ ಇತರೆ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಕ್ಷೇತ್ರ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಮುಖಂಡರಾದ ಕಿರಣ್ ಕೊಡ್ಗಿ, ಭಾಸ್ಕರ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ಸುರೇಶ ಶೆಟ್ಟಿ ಬೀಜಾಡಿ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.