ಕರಾವಳಿ

ಮನಪಾ ಚುನಾವಣೆ : ಅಕ್ಟೋಬರ್ 31, ನಾಮಪತ್ರ ಸಲ್ಲಿಸಲು ಕೊನೆಯ ದಿನ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ನವೆಂಬರ್ 12ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 31. ನಾಮಪತ್ರಗಳನ್ನು ಪರಿಶೀಲಿಸುವ ದಿನ ನವೆಂಬರ್ 2, ಉಮೇದುವಾರರನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ನವೆಂಬರ್ 4, ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನ ಮತ್ತು ಸಮಯ ನವೆಂಬರ್ 12 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ. ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನ ಮತ್ತು ಸಮಯ ನವೆಂಬರ್ 13 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ. ಮತಗಳ ಎಣಿಕೆಯ ದಿನ ನವೆಂಬರ್ 14 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಚುನಾವಣೆಯನ್ನು ಮುಕ್ತಾಯಗೊಳಿಸಬೇಕಾದ ದಿನ ನವೆಂಬರ್ 14.

ಗ್ರಾಮ ಪಂಚಾಯತ್‍ಗಳ ಉಪಚುನಾವಣೆಗಳ ಮೀಸಲಾತಿ ವಿವರ ಇಂತಿವೆ : 

ಮೂಡಬಿದ್ರೆ ತಾಲೂಕಿನ 2- ದರೆಗುಡ್ಡೆ ಗ್ರಾಮ ಪಂಚಾಯತ್‍ನ ದರೆಗುಡ್ಡೆ-1 ಮೀಸಲಾತಿ- ಸಾಮಾನ್ಯ ಮಹಿಳೆ, ಬಂಟ್ವಾಳ ತಾಲೂಕಿನ 13- ಪಂಜಿಕಲ್ಲು ಗ್ರಾಮ ಪಂಚಾಯತ್‍ನ ಮೂಡನಡುಗೋಡು-2 ಮೀಸಲಾತಿ- ಸಾಮಾನ್ಯ, ಪುತ್ತೂರು ತಾಲೂಕಿನ 7- ಬಜತ್ತೂರು ಗ್ರಾಮ ಪಂಚಾಯತ್‍ನ ಬಜತ್ತೂರು-2 ಮೀಸಲಾತಿ- ಸಾಮಾನ್ಯ, 17- ಮರ್ಧಾಳ ಗ್ರಾಮ ಪಂಚಾಯತ್‍ನ 102- ನೆಕ್ಕಿಲಾಡಿ-2 ಮೀಸಲಾತಿ- ಸಾಮಾನ್ಯ, ಬೆಳ್ತಂಗಡಿ ತಾಲೂಕಿನ 48- ಅರಸಿನಮಕ್ಕಿ ಗ್ರಾಮ ಪಂಚಾಯತ್‍ನ ಹತ್ಯಡ್ಕ-2 ಮೀಸಲಾತಿ- ಸಾಮಾನ್ಯ, ಸುಳ್ಯ ತಾಲೂಕಿನ 7- ಕಲ್ಮಡ್ಕ ಗ್ರಾಮ ಪಂಚಾಯತ್‍ನ ಕಲ್ಮಡ್ಕ-2 ಮೀಸಲಾತಿ- ಸಾಮಾನ್ಯ (ಮಹಿಳೆ), 5- ಬಳ್ಪ ಗ್ರಾಮ ಪಂಚಾಯತ್‍ನ ಕೇನ್ಯ-1 ಮೀಸಲಾತಿ- ಪರಿಶಿಷ್ಟ ಜಾತಿ

Comments are closed.