ಕರಾವಳಿ

ಕನ್ನಡದಲ್ಲಿ ನಾಮಫಲಕ ಪ್ರದರ್ಶನ ಕಡ್ಡಾಯ : ಕಸಾಪ ಅಧ್ಯಕ್ಷ ಪ್ರದೀಪ ಕಲ್ಕೂರ‌ ಆಗ್ರಹ

Pinterest LinkedIn Tumblr

ಮಂಗಳೂರು, ಆಕ್ಟೋಬರ್.23: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ವಾಣಿಜ್ಯ ಮಳಿಗೆ, ವಸತಿ ಸಂಕೀರ್ಣ ವಾಣಿಜ್ಯ ಸಂಕೀರ್ಣ, ಸಂಘ, ಸಂಸ್ಥೆ ಹೀಗೆ ಎಲ್ಲಾ ಸಂಸ್ಥೆಗಳಲ್ಲೂ ನಾಮ ಫಲಕಗಳನ್ನು ಕಡ್ಡಾಯವಾಗಿಕನ್ನಡ ಭಾಷೆಯಲ್ಲೇ ಪ್ರದರ್ಶಿಸುವಂತೆ ಆದೇಶ ಹೊರಡಿದುವಂತೆದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ.

ಈ ಕುರಿತು ಪರಿಷತ್ತಿನ ಜಿಲ್ಲಾಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಮಂಗಳೂರು ಮಹಾನಗರ ಪಾಲಿಕೆಯ‌ಆಯುಕ್ತರಾಗಿರುವ ಶಾನಾಡಿ‌ಅಜಿತ್‌ಕುಮಾರ್ ಹೆಗ್ಡೆಯವರಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ.

ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆಯು ನವೆಂಬರ್ 1ರೊಳಗೆ ಕನ್ನಡದಲ್ಲೇ ನಾಮಫಲಕಗಳನ್ನು ಪ್ರದರ್ಶಿಸುವ ಕುರಿತು‌ ಆದೇಶ ನೀಡಿದ್ದು‌ಇದುರಾಜ್ಯದಾದ್ಯಂತಜಾರಿಗೆ ಬರುವಂತಾಗಲಿ, ರಾಜ್ಯದ ಪ್ರಮುಖ ನಗರಗಳಲ್ಲೊಂದಾದ ಮಂಗಳೂರಿನಲ್ಲೂ ಈ ಕುರಿತು ದಿಟ್ಟಕ್ರಮ ಕೈಗೊಳ್ಳುವಂತಾಗಲೆಂದು ಕಲ್ಕೂರ ಆಗ್ರಹಿಸಿದ್ದಾರೆ.

Comments are closed.