ಕರಾವಳಿ

ಮಂಗಳೂರು: ಹೋಂಸ್ಟೇ, ಪಿ.ಜಿ. ನಡೆಸಲು ಲೈಸನ್ಸ್ ಕಡ್ಡಾಯ- ಇಲ್ಲದಿದ್ದರೆ ಉದ್ದಿಮೆ ಸ್ಥಗಿತ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಅಕ್ಟೋಬರ್ 19 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲಾ ಉದ್ದಿಮೆದಾರರು ಪ್ರತಿ ಆರ್ಥಿಕ ವರ್ಷಾಂತ್ಯದ ಮಾರ್ಚ್ ತಿಂಗಳೊಳಗೆ ತಮ್ಮ ಉದ್ದಿಮೆ ಪರವಾನಿಗೆಯನ್ನು ಮಂಗಳೂರು ಮಹಾನಗರಪಾಲಿಕೆಯಲ್ಲಿ ನವೀಕರಿಸಿಕೊಂಡು ಉದ್ದಿಮೆಯನ್ನು ಮುಂದುವರಿಸಬೇಕು. ಹೊಸ ಉದ್ದಿಮೆ ಪ್ರಾರಂಭಿಸುವ ಮೊದಲು ಉದ್ದಿಮೆ ಪರವಾನಿಗೆಯನ್ನು ಪಡೆದುಕೊಂಡು ಉದ್ದಿಮೆಯನ್ನು ನಡೆಸಬೇಕು.

ಆದರೆ ಪ್ರಸ್ತುತ ಹೆಚ್ಚಿನ ಉದ್ದಿಮೆದಾರರು ಹಾಗೂ ಪಿ.ಜಿ ಮತ್ತು ಹೋಂ ಸ್ಟೇಗಳನ್ನು ನಡೆಸುವವರು ಉದ್ದಿಮೆ ಪರವಾನಿಗೆಯನ್ನು ಪಡೆಯದೇ/ನವೀಕರಿಸದೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯದೇ ಉದ್ದಿಮೆಯನ್ನು ಮುಂದುವರಿಸುತ್ತಿ ರುವುದು ಮಂಗಳೂರು ಮಹಾನಗರಪಾಲಿಕೆಯ ಗಮನಕ್ಕೆ ಬಂದಿದೆ. ಆದುದರಿಂದ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಉದ್ದಿಮೆ ನಡೆಸುತ್ತಿರುವ ಎಲ್ಲಾ ಪಿ.ಜಿ ಮತ್ತು ಹೋಂ ಸ್ಟೇಗಳ ಮಾಲೀಕರು ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಯನ್ನು ಸಲ್ಲಿಸಿ ನವೆಂಬರ್ 15ರೊಳಗೆ ಕಡ್ಡಾಯವಾಗಿ ಪರವಾನಿಗೆಯನ್ನು ಪಡೆಯಬೇಕು ಹಾಗೂ ನವೀಕರಿಸಲು ಬಾಕಿ ಇರುವ ಉದ್ದಿಮೆದಾರರು ಪರವಾನಿಗೆಯನ್ನು ನವೀಕರಿಸಬೇಕು.

ತಪ್ಪಿದ್ದಲ್ಲಿ ಈ ಪತ್ರಿಕಾ ವರದಿಯನ್ನು ಅಂತಿಮ ನೋಟೀಸು ಎಂದು ಪರಿಗಣಿಸಿ ಇನ್ನು ಮುಂದಕ್ಕೆ ಯಾವುದೇ ಮುನ್ಸೂಚನೆ ನೀಡದೆ ತಮ್ಮ ಉದ್ದಿಮೆಯನ್ನು ಸ್ಥಗಿತಗೊಳಿಸುವ/ಮುಚ್ಚುವ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಎಲ್ಲಾ ಆಗುಹೋಗುಗಳಿಗೆ ಉದ್ದಿಮೆದಾರರೇ ಜವಾಬ್ದಾರರು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Comments are closed.