ಕರಾವಳಿ

ಗುಲ್ವಾಡಿಯಲ್ಲಿ ಒಂದೊಳ್ಳೆ ಮಟನ್ ಮಾರ್ಕೇಟ್ ಮಾಡಿ: ‘ವಾರದ ಸಂತೆ’ ಉದ್ಘಾಟಿಸಿ ಶಾಸಕ ಬಿ.ಎಂ.ಎಸ್ (Video)

Pinterest LinkedIn Tumblr

ಕುಂದಾಪುರ: ಗುಲ್ವಾಡಿ ಸಣ್ಣಕ್ಕಿ ತುಂಬಾ ಫೇಮಸ್. ಹಾಗೆಯೇ ಗುಲ್ವಾಡಿ ಭಾಗದಲ್ಲಿ ಉತ್ತಮ ಗುಣಮಟ್ಟದ ಕುರಿ ಮಾಂಸ ಮಾರಾಟ ಕೇಂದ್ರ ಮಾಡಿದಲ್ಲಿ ಒಂದಷ್ಟು ವಾಣಿಜ್ಯ ವಹಿವಾಟು ಹೆಚ್ಚುಗೊಳಿಸಲು ಸಾಧ್ಯವಿದೆ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಜನರಿಗೆ ಸಲಹೆ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಗುಲ್ವಾಡಿ ಗ್ರಾಮಪಂಚಾಯತ್ ಸಮೀಪ ‘ಗುಲ್ವಾಡಿ ವಾರದ ಸಂತೆ’ ಉದ್ಘಾಟಿಸಿ ಶಾಸಕರು ಮಾತನಾಡಿದರು.

ಕುಂದಾಪುರದಲ್ಲಿ ಉತ್ತಮ ಗುಣಮಟ್ಟದ ಕುರಿ ಮಾಂಸ (ಮಟನ್) ಸಿಗಲ್ಲ ಎಂಬುದು ತಿಳಿದಿದ್ದು ಗುಲ್ವಾಡಿ ಜನರು ಬನ್ನೂರಿನ ಕುರಿ ತಂದು ಮಾರಿದಲ್ಲಿ ಒಳ್ಳೆಯ ಮಾರುಕಟ್ಟೆ ಸಿದ್ಧವಾಗಲಿದೆ. ಕುಂದಾಪುರದ ಜನರು ಶೌರ್ಯ ಮತ್ತು ಸ್ವಾಭಿಮಾನಕ್ಕೆ ಹೆಸರಾಗಿದ್ದು ಪರಿವರ್ತನೆ ಜಗದ ನಿಯಮ ಎಂಬಂತೆ ಹೊಸಹೊಸ ಉದ್ಯಮಗಳನ್ನು ಸ್ರಷ್ಟಿ ಮಾಡಿಕೊಳ್ಳೋಣ ಎಂದು ಕರೆಕೊಟ್ಟಿದ್ದಲ್ಲದೇ ತಮ್ಮ ಕುಟುಂಬಕ್ಕೂ ಮತ್ತು ಗುಲ್ವಾಡಿಗೂ ಇರುವ ಸಂಬಂಧಗಳ ಬಗ್ಗೆ ಮೆಲುಕು ಹಾಕಿದರು.

ಜಿ.ಪಂ ಸದಸ್ಯೆ ಜ್ಯೋತಿ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ಎ.ಪಿ.ಎಂ.ಸಿ ಅಧ್ಯಕ್ಷ ಶರತ್ ಕುಮಾರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಸತೀಶ್ ಪೂಜಾರಿ, ಗುಲ್ವಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ.ಪಿ. ಮಹಮ್ಮದ್, ವಿಜಯ ಬ್ಯಾಂಕ್ ನಿವೃತ್ತ ಜನರಲ್ ಮೆನೇಜರ್ ದಿವಾಕರ ಹೆಗ್ಡೆ, ಉದ್ಯಮಿಗಳಾದ ಬಾಲಕೃಷ್ಣ ಪಿ.ಭಂಡಾರಿ, ಪ್ರಶಾಂತ್ ತೋಳಾರ್, ಗುಲ್ವಾಡಿಯ ಮೆಹರಾಜ್ ಜುಮ್ಮಾ ಮಸೀದಿಯ ಅಧ್ಯಕ್ಷ ಜಿ.ಸರದಾರ್ ಹಾಜಿ, ಗುಲ್ವಾಡಿ ಆಲ್-ಬದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಜಿ.ಎಮ್. ಚರಿಯಬ್ಬ ಹಾಜಿ, ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ, ನ್ಯಾಯವಾದಿ ಶರತ್ ಕುಮಾರ್ ಶೆಟ್ಟಿ ಗುಲ್ವಾಡಿ, ಕರ್ಕುಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಮಡಿವಾಳ, ಗುಲ್ವಾಡಿ ಗ್ರಾಮಸ್ಥರ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಸೌಕೂರು ಗುಲ್ವಾಡಿ, ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ವನಿತಾ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.