ಕರಾವಳಿ

ಕರಾವಳಿಯ ಸಂಸ್ಕೃತಿ ವಿದೇಶದಲ್ಲೂ ಬಿತ್ತರಿಸಿದ ಇಲ್ಲಿಯ ತುಳುವರ ಕೆಲಸ ಶ್ಲಾಘನೀಯ : ರಂಗ ಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಬಿ.ಎ ವಿವೇಕ್ ರೈ

Pinterest LinkedIn Tumblr

ಮಂಗಳೂರು : ಕರಾವಳಿಯ ಸಂಸ್ಕೃತಿಯನ್ನು ವಿದೇಶದಲ್ಲೂ ಹರಡಿ ಬೆಳಗಿಸುವ ಕಾರ್ಯವನ್ನು ಪರವೂರಿನ ತುಳುವರು ಮಾಡಿದ್ದಾರೆ. ಅಲ್ಲಿದ್ದು ಇಲ್ಲಿಯ ನೆಲದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವುದು ಶ್ಲಾಘನೀಯ ಎಂದು ಹಿರಿಯ ವಿದ್ವಾಂಸ ಕನ್ನಡ ವಿ.ವಿಯ ವಿಶ್ರಾಂತ ಕುಲಪತಿ ಡಾ. ಬಿ.ಎ ವಿವೇಕ್ ರೈ ತಿಳಿಸಿದರು.

ರಂಗ ಚಾವಡಿ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಮಂಗಳೂರು ಪುರಭವನದಲ್ಲಿ ನಡೆದ ರಂಗ ಚಾವಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ರಂಗಜ್ಯೋತಿಯನ್ನು ಪ್ರಜ್ವಲನೆ ಮಾಡಿ ಮಾತನಾಡಿದರು.

ಕೊಲ್ಲಿ ರಾಷ್ಟ್ರದಲ್ಲಿ ತುಳು ಭಾಷೆಯ ಬೆಳವಣಿಗೆಯಲ್ಲಿ ತೊಡಗಿರುವ ಯು‌ಎ‌ಇ ಕನ್ನಡ ಮತ್ತು ತುಳುಭಾಷಾ ಸಾಂಸ್ಕೃತಿಕ ರಾಯಭಾರಿ, ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರನ್ನು ಡಾ. ಬಿ.ಎ ವಿವೇಕ್ ರೈ ರಂಗಚಾವಡಿ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸರ್ವೋತ್ತಮ ಶೆಟ್ಟಿ ಅವರು ತುಳು ಕನ್ನಡ ಭಾಷಾ ಬೆಳವಣಿಗೆಗೆ ಕಾರ್ಯ ನಿರ್ವಹಿಸುತ್ತಿ ರುವ ಕೊಲ್ಲಿ ರಾಷ್ಟ್ರದ ಎಲ್ಲರಿಗೂ ಈ ಸನ್ಮಾನ-ಗೌರವ ಸಲ್ಲಬೇಕೆಂದರು. ರಂಗಚಾವಡಿ ಸಂಸ್ಥೆ ಪ್ರತೀ ವರ್ಷ ಕಲಾವಿದರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಲನಚಿತ್ರ ನಿರ್ಮಾಪಕ ಡಾ. ಸಂಜೀವ ದಂಡೆಕೇರಿ ಅವರು ಮಾತನಾಡುತ್ತಾ ದುಬಾಯಿಯ ಗಮ್ಮತ್ ಕಲಾವಿದರು ಬಯ್ಯಮಲ್ಲಿಗೆ ನಾಟಕವನ್ನು ಈ ಹಿಂದೆ ದುಬಾಯಿಯಲ್ಲೂ ಪ್ರದರ್ಶಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದಾರೆ. ಆ ತಂಡದವರು ಮಂಗಳೂರಿಗೆ ಆಗಮಿಸಿ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಯುನೈಟೆಡ್ ಯು‌ಎ‌ಇ ಎಕ್ಸ್ ಚೇಂಜ್‌ನ ನಿಕಟಪೂರ್ವ ಅಧ್ಯಕ್ಷ ಸಿ‌ಎ ಸುಧೀರ್ ಕುಮಾರ್ ಶೆಟ್ಟಿ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ ಶೆಟ್ಟಿ, ಚಲನ ಚಿತ್ರ ನಿರ್ಮಾಪಕ ಹರೀಶ್ ಬಂಗೇರ ದುಬಾಯಿ, ದುಬಾಯಿ ಬಿಲ್ಲವಾಸ್ ಸಂಘದ ಮಾಜೀ ಅಧ್ಯಕ್ಷ ಸತೀಶ್ ಪೂಜಾರಿ ದುಬಾಯಿ, ಪರಂಗಿ ಪೇಟೆ ರೋಟರಿ ಕ್ಲಬ್‌ನ ಅಧ್ಯಕ್ಷ ಎ.ಕೆ ಜಯರಾಮ ಶೇಖ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ, ದುಬಾಯಿ ಗಮ್ಮತ್ ಕಲಾವಿದರು ಸಂಸ್ಥೆಯ ಅಧ್ಯಕ್ಷ ಕಿರಣ್ ಶೆಟ್ಟಿ, ರಂಗ ಚಾವಡಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಕದ್ರಿ ನವನೀತ ಶೆಟ್ಟಿ, ವಿ.ಜಿ ಪಾಲ್ ಮೊದಲಾದವರು ಉಪಸ್ಥಿತರಿದ್ದರು.

ವಿ.ಜಿ ಪಾಲ್ ಸ್ವಾಗತಿಸಿ, ನಿತೇಶ್ ಶೆಟ್ಟಿ ಎಕ್ಕಾರ್ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಡಾ. ಸಂಜೀವ ದಂಡೇಕೇರಿಯವರ ಬಯ್ಯಮಲ್ಲಿಗೆ ವಿಶ್ವನಾಥ ಶೆಟ್ಟಿ ದುಬಾಯಿ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

Comments are closed.