ಕರಾವಳಿ

ಉಡುಪಿ ಸೆನ್ ಪೊಲೀಸರ ಕಾರ್ಯಾಚರಣೆ: ಲಕ್ಷಾಂತರ ಮೌಲ್ಯದ ಗಾಂಜಾ ಸಹಿತ ಇಬ್ಬರು ಅಂದರ್!

Pinterest LinkedIn Tumblr

ಉಡುಪಿ: ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಪೊಲೀಸರು, ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗಾಂಜಾ ಸೇರಿದಂತೆ ಅಂದಾಜು 6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ಪಿಯೂಷ್ ಅಗರ್‌ವಾಲ್(20), ಮಧ್ಯಪ್ರದೇಶ ಮೂಲದ ರಿಷಬ್ ರಾಜ್‌ಸಿಂಗ್ (21) ಬಂಧಿತ ಆರೋಪಿಗಳು.

ಆರೋಪಿಗಳು ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪದ ಮನೆಯೊಂದರಲ್ಲಿ ಕಾನೂನು ಬಾಹಿರವಾಗಿ 1,35,000ರೂ. ಮೌಲ್ಯದ ಗಾಂಜಾ ಮಾರಾಟ ಮಾಡಲು ದಾಸ್ತಾನು ಇರಿಸಿದ್ದರು. ಅಂದಾಜು 300 ರೂಪಾಯಿ ಮೌಲ್ಯದ ತೂಕ ಸಾಧನ, ರೂಪಾಯಿ 50 ರೂ. ಬೆಲೆಬಾಳುವ ಸಣ್ಣ ಸಣ್ಣ ಖಾಲಿ ಪ್ಲಾಸ್ಟಿಕ್ ಚೀಲಗಳು, 26,000 ರೂ. ಬೆಲೆಬಾಳುವ ಮೊಬೈಲ್ ಹ್ಯಾಂಡ್ ಸೆಟ್‌ಗಳು, ಗಾಂಜಾ ಮಾರಾಟ ಮಾಡಿ ಬಂದ ನಗದು ಹಣ ರೂಪಾಯಿ 3,15,000 ಸಹಿತ ಒಟ್ಟು ರೂಪಾಯಿ 6,91,350 ಅಂದಾಜು ಮೌಲ್ಯದ ಸ್ವತ್ತುಗಳನ್ನು ಈ ವೇಳೆ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಮತ್ತು ಪಿ.ಎಸ್.ಐ. ಲಕ್ಷ್ಮಣ, ಪಿ.ಎಸ್.ಐ. ನಾರಾಯಣ, ಎ.ಎಸ್.ಐ. ಕೇಶವ ಗೌಡ ಹಾಗೂ ಸಿಬ್ಬಂದಿಯವರಾದ ಕೃಷ್ಣಪ್ರಸಾದ್, ಶ್ರೀಧರ್, ರಾಘವೇಂದ್ರ, ಪ್ರದೀಪ್ ಶೆಟ್ಟಿ, ಅರುಣ್ ಕುಮಾರ್, ಸಂತೋಷ ಖಾರ್ವಿ, ಪ್ರವೀಣ್, ಸಂತೋಷ ನಾಯ್ಕ, ಜೀವನ್ ಸಂಜಯ್ ರವರು ಪಾಲ್ಗೊಂಡಿದ್ದರು.

Comments are closed.