ಕರಾವಳಿ

ಸ್ವಚ್ಚ ಭಾರತ,ಸ್ವಚ್ಚ ಮಂಗಳೂರಿನ ಬಗ್ಗೆ ಮಠಗಳ ಪ್ರಯತ್ನ ಶ್ಲಾಘನೀಯ : ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಬೋಳೂರು ಮಾತಾ ಅಮೃತಾನಂದಮಯಿ ಮಠ ಅಮಲ ಭಾರತ ಸ್ವಚ್ಚತಾ ಅಭಿಯಾನ – ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮ ಪರಿಣಾಮಕಾರಿ : ಶಾಸಕ ವೇದವ್ಯಾಸ ಕಾಮತ್

ಮಂಗಳೂರು : ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಎಂ ಆರ್ ಪಿ ಎಲ್ ಸಹಯೋಗದೊಂದಿಗೆ ಭಾನುವಾರ ಸುಲ್ತಾನ್  ಬತ್ತೇರಿ ನದಿಕಿನಾರೆ, ಬೋಳೂರು,ಮಠದ ಕಣಿ ಹಾಗೂ ಉರ್ವ ಪರಿಸರದದಲ್ಲಿ ಬೃಹತ್ ಸ್ವಚ್ಚತಾ ಜನ ಜಾಗರಣ ಅಭಿಯಾನ ಹಮ್ಮಿಕೊಳ್ಳಲಾಯಿತು. ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅಮೃತ ಜ್ಯೋತಿ ಬೆಳಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ  ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಸ್ವಚ್ಚ ಭಾರತ,ಸ್ವಚ್ಚ ಮಂಗಳೂರಿನ ಬಗ್ಗೆ ಮಠಗಳ ಪ್ರಯತ್ನ ಶ್ಲಾಘನೀಯ, ಮಾತಾ ಅಮೃತಾನಂದಮಯಿಯವರ ಆಶೀರ್ವಾದದೊಂದಿಗೆ 2000ಕ್ಕೂ ಅಧಿಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸುತ್ತಿರುವ ಪರಿಣಾಮ ಇಂದು ಹೆಚ್ಚಿನ ಜನರಲ್ಲಿ ವಿಶೇಷವಾಗಿ ಸಣ್ಣ ಮಕ್ಕಳಲ್ಲಿ ವ್ಯಕ್ತವಾಗುತ್ತಿ ರುವುದು ಸಂತೃಪ್ತಿ ತಂದಿದೆ. ಹಸಿರು ಪರಿಸರದ ಪ್ರಮಾಣ ಇಳಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂದೆ ಮನೆಗೆ ಲೈಸೆನ್ಸ್ ನೀಡುವಾಗ ಕನಿಷ್ಟ2 ಗಿಡ ನೀಡಬೇಕೆಂದು ಕಡ್ಡಾಯ ಗೊಳಿಸುವ ಅಗತ್ಯವಿದೆ ಎಂದರು.

ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಎಲ್ಲರ ಸಹಕಾರ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ದುಷ್ಪರಿಣಾಮ ಉಂಟುಮಾಡುವ ಏಕ ಬಳಕೆ ಪ್ಲಾಸ್ಟಿಕ್ ಉಪಯೋಗ ಮಾಡದಿರುವಂತೆ ಪ್ರತಿಜ್ಞೆ ಕೈಗೊಳ್ಳಲಾಯಿತು. ಪ್ರೊಫೆಸರ್ ವಿನೀತ ರೈ ಪ್ರತಿಜ್ಞಾವಿಧಿ ಬೋಧನೆ ಮಾಡಿದರು.

ಎಂ.ಆರ್ ಪಿ ಎಲ್ ನ ಮಹಾ ಪ್ರಬಂಧಕ  ಸುಬ್ರಾಯ ಭಟ್ ಮತ್ತು ಪ್ರಬಂಧಕರಾದ  ವೀಣಾ ಶೆಟ್ಟಿ ಗಣ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೀಣಾ ಶೆಟ್ಟಿ ಯವರು ಮಾತನಾಡಿ ಎಂ ಆರ್ ಪಿ ಎಲ್ ಸಂಸ್ಥೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಆಧಾರವಾದ ಸಮಾಜವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡಾ ಇದೆ.ಆದುದರಿಂದ ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣಾ ಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮಾತಾ ಅಮೃತಾನಂದಮಯಿ ಮಠದ ಅಮಲ ಭಾರತ ಅಭಿಯಾನದಲ್ಲಿ ಭಾಗವಹಿಸಿ ರುವುದರಿಂದ ಧನ್ಯತಾ ಭಾವ ಮೂಡಿಸಿದೆ ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ “ಅಮಲ ಭಾರತ ಅಭಿಯಾನ ಪ್ರಾರಂಭ ಮಾಡಿದಾಗ ಜನರ ಪ್ರೋತ್ಸಾಹ ಆಶಾದಾಯಕವಾಗಿರಲಿಲ್ಲ ,ಆದರೂ ನಮ್ಮ ಪ್ರಯತ್ನ ಮುಂದುವರಿಸುತ್ತಾ ಅಮ್ಮನವರ ಸ್ವಚ್ಚ, ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ಪ್ರಯತ್ನ ಮುಂದುವರಿಸುತ್ತಾ ಬಂದೆವು.ಈಗ ನಮ್ಮ ಸೇವೆಗೆ ಎಂ ಆರ್ ಪಿಎಲ್ ಕೂಡಾ ಸಹಕಾರನೀಡುವುದರೊಂದಿಗೆ ಅಧಿಕ ಸಂಖ್ಯೆಯಲ್ಲಿ ಸೇವಾರ್ಥಿಗಳು ಭಾಗವಹಿಸಿ ಹೆಚ್ಚಿನ ಸ್ವಚ್ಚತಾ ಸೇವೆಗಳೊಂದಿಗೆ ಯಶಸ್ವಿಯಾಗಿ ಮುನ್ಬಡೆಯುತ್ತಿದೆ. 2010 ರ ಸೆಪ್ಟೆಂಬರ್27 ರಂದು ಅಮ್ಮನವರ ಜನ್ಮದಿನದಂದು ಪ್ರಾರಂಭಗೊಂಡಿತು.

ನಾಲ್ಕನೇ ಭಾನುವಾರ ಸ್ವಚ್ಚ ಭಾನುವಾರ ಎಂಬ ಧ್ಯೇಯ ವಾಕ್ಯದೊಂದಿಗೆ ಸೇವೆ ಸಲ್ಲಿಸಲಾಗುತ್ತಿತ್ತು.ಎಂ ಆರ್ ಪಿ ಎಲ್ ನೆರವಿನಿಂದ 2018ರ ಅಕ್ಟೋಬರ್ 2 ರಿಂದ ಸೆಪ್ಟೆಂಬರ್15 ರ ತನಕ 204 ಕಾರ್ಯಕ್ರಮ ಆಯೋಜಿಸಿ ಪರಿಸರ ಸ್ವಚ್ಛತೆ ಮತ್ತು ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಇದುವರೆಗೆ ಕುಂದಾಪುರದಿಂದ ಸುಬ್ರಹ್ಮಣ್ಯ ದವರೆಗೆ ಉಭಯ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಈ ಸೇವೆಯಲ್ಲಿ ಭಾಗವಹಿಸುತ್ತಿರುವುದು ಹಾಗೂ 2000 ಕ್ಕೂ ಅಧಿಕ ಕಾರ್ಯಕ್ರಮ ಯಶಸ್ವಿಯಾಗಿರುವುದು ತೃಪ್ತಿ ಮೂಡಿಸಿದೆ ಎಂದರು.

ವೇದಿಕೆಯಲ್ಲಿ ಕೆನರಾ ಕಾಲೇಜಿನ ಪ್ರೊಫೆಸರ್ ದೇಜಮ್ಮ,ಪ್ರೊಫೆಸರ್ ವಿಂದ್ಯಾ,ಶಾರದಾ ವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ವನಿತಾ, ಅಮಲ ಭಾರತ ಅಭಿಯಾನದ ಅಧ್ಯಕ್ಷ ಡಾ.ಜೀವರಾಜ್ ಸೊರಕೆ,  ಪ್ರಸಾದ್ ರಾಜ್ ಕಾಂಚನ್ ಉಪಸ್ಥಿತರಿದ್ದರು.

ನಿವೃತ್ತ ಅಪರ ಜಿಲ್ಲಾಧಿಕಾರಿ  ಪ್ರಭಾಕರ ಶರ್ಮ,ಸುರೇಶ್ ಅಮೀನ್,ಮಾಧವ ಸುವರ್ಣ,ಮುರಳೀಧರ ಶೆಟ್ಟಿ, ದಿಲೀಪ್,ಶಾಮ ಸುಂದರ ಕಾಮತ್, ರವೀಂದ್ರನಾಥ, ಚಂದ್ರಹಾಸ ಸುವರ್ಣ, ಸುಗುಣನ್, ಭೋಜರಾಜ್ ಕರ್ಕೇರ ಕೃಷ್ಣ ಶೆಟ್ಟಿ, ನಿರಂಜನ ಅಡ್ಯಂತಾಯ,ಪ್ರಕಾಶ್ ಕರ್ಕೇರ ಮೊದಲಾದವರು ಭಾಗವಹಿಸಿದ್ದರು.

ಕೆನರಾ ಕಾಲೇಜು,ಶಾರದಾ ಕಾಲೇಜು,ಕಾರ್ಮೆಲ್ ಕಾಲೇಜು,ಮೊಡಂಕಾಪುಗಳ ವಿದ್ಯಾರ್ಥಿಗಳ ,ಹಾಗೂ ಎಂಆರ್ ಪಿ ಎಲ್ ಅಧಿಕಾರಿ ಗಳು, ಸಿಬ್ಬಂದಿಗಳು,ಅಮ್ಮನವರ ಭಕ್ತರ ಸಹಿತ ಮುನ್ನೂರಕ್ಕೂ ಅಧಿಕ ಸೇವಾರ್ಥಿಗಳು ಭಾಗವಹಿಸಿ ಸುಲ್ತಾನ್ ಬತ್ತೇರಿ ನದಿಕಿನಾರೆ, ಬೋಳೂರು,ಮಠದ ಕಣಿ ಹಾಗೂ ಉರ್ವ ಪರಿಸರದದಲ್ಲಿ ವಿವಿಧ ತಂಡಗಳು ಸೇರಿ ಸ್ವಚ್ಚ ಗೊಳಿಸಿದರು.

ಪರಿಸರದ ಜನರಿಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚಲಾಯಿತು. ಗೌರವಾಧ್ಯಕ್ಷ ಸಿ ಎ ವಾಮನ್ ಕಾಮತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಡಾ.ದೇವದಾಸ್ ವಂದಿಸಿದರು.

Comments are closed.