ಕರಾವಳಿ

ಸ್ವಚ್ಛ ಬೆಂಗರೆಗಾಗಿ ಸರ್ವರ ಸಹಕಾರ ಅಗತ್ಯ : ಅಮಲ ಭಾರತ ಸ್ವಚ್ಚತಾ ಅಭಿಯಾನ ಉದ್ಘಾಟಿಸಿ ಚೇತನ್ ಬೆಂಗ್ರೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.16 : ಸ್ವಚ್ಛ ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತದ ಪರಿಕಲ್ಪನೆಯ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಅಮಲ ಭಾರತ ಸ್ವಚ್ಚತಾ ಅಭಿಯಾನ ಮಂಗಳೂರಿನ ತೋಟ ಬೆಂಗರೆಯಲ್ಲಿ ರೋಟರಿ ಸಮುದಾಯ ದಳದ ಸಹಕಾರದೊಂದಿಗೆ, ಎಂ ಆರ್ ಪಿ ಎಲ್ ಸಹಭಾಗಿತ್ವದಲ್ಲಿ ಭಾನುವಾರ ಜರುಗಿತು.

ಬೆಂಗರೆ ಮೊಗವೀರ ಮಹಾಸಭೆಯ ಅಧ್ಯಕ್ಷ ಚೇತನ್ ಬೆಂಗ್ರೆ ಅವರು ಅಮಲ ಭಾರತ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮಂಗಳೂರಿನ ಮಾತಾ ಅಮೃತಾನಂದಮಯಿ ಮಠ ಹಾಗೂ ರೋಟರಿ ಸಮುದಾಯ ದಳದ ಸ್ವಚ್ಚತಾ ಸೇವೆ ಶ್ಲಾಘನೀಯ, ನಮ್ಮ ಬೆಂಗ್ರೆಯನ್ನು ಸ್ವಚ್ಛ ಬೆಂಗ್ರೆಯನ್ನಾಗಿ ಮಾಡುವ ಕಾರ್ಯಕ್ಕೆ ಸರ್ವರೂ ಸಹಕಾರ ನೀಡುವಂತೆ ಕರೆಯಿತ್ತರು.

ಈ ಸಂದರ್ಭದಲ್ಲಿ ಮಾತನಾಡಿದ ಮಾತಾ ಅಮೃತಾನಂದಮಯಿ ಸೇವಾಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ ಅಮಲ ಭಾರತ ಸ್ವಚ್ಚತಾ ಅಭಿಯಾನಕ್ಕೆ ಸಹಕಾರ ನೀಡುತ್ತಿರುವ ಎಲ್ಲಾ ಸಂಘಸಂಸ್ಥೆಗಳು, ರೋಟರಿಯಂತಹ ಸೇವಾ ಸಂಸ್ಥೆಗಳು ಹಾಗೂ ವಿಶೇಷವಾಗಿ ವಿದ್ಯಾರ್ಥಿ ಸಮುದಾಯದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಚನ ಹ್ಯುಂಡೈ ಎಂ.ಡಿ ಶ್ರೀ ಪ್ರಸಾದ್ ರಾಜ್ ಕಾಂಚನ್,ಮಿಲಾಗ್ರಿಸ್ ಪ್ರಥಮ ದರ್ಜೆ ಕಾಲೇಜು ಎನ್ ಎಸ್ ಎಸ್ ಅಧಿಕಾರಿ ಕಿರಣ್ ಡಿ’ ಸೋಜಾ , ಸ್ಥಳೀಯ ವೈದ್ಯ ಡಾ.ರಾಹುಲ್,ಬೆಂಗ್ರೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಸಚಿನ್‌ ಸುವರ್ಣ, ಬೆಂಗ್ರೆ ರೋಟರಿ ಸಮುದಾಯ ದಳದ ಅಧ್ಯಕ್ಷ ಶ್ರೀ ಸಂಜಯ್, ಉಪಾಧ್ಯಕ್ಷ ಶ್ರೀ ಲೋಕೇಶ್,ಕಾರ್ಯದರ್ಶಿ ರಾಕೇಶ್ ಮತ್ತು ಪದಾಧಿಕಾರಿಗಳು, ಶಾಲಾ ಶಿಕ್ಷಕಿ ಸುಮಾ,ಮಾಜಿ ಕಾರ್ಪೋರೇಟರ್ ಮೀರಾ ಕರ್ಕೇರ,ಮಿಲಾಗ್ರಿಸ್ ಪ್ರಥಮ ದರ್ಜೆ ಕಾಲೇಜಿನ ಸಿಸ್ಟರ್ ಮಾಕ್ಸಿ, ಮುಸ್ತಫಾ ,ಕರಾವಳಿ ಪಡೆಯ ರಾಜೇಶ್, ಅಮಲ ಭಾರತ ಅಭಿಯಾನದ ಸಮನ್ವಯಾಧಿಕಾರಿ ಸುಗುಣನ್,ರಾಜನ್,ಚಂದ್ರಹಾಸ ಸುವರ್ಣ, ಶಿಫಾಲಿ ಉಪಸ್ಥಿತರಿದ್ದರು.

ಶ್ರೀ ಮಾಧವ ಸುವರ್ಣ ಸ್ವಾಗತಿಸಿದರು. ಅಮಲ ಭಾರತ ಅಭಿಯಾನದ ಮುಖ್ಯ ಸಮನ್ವಯಾಧಿಕಾರಿ ಶ್ರೀ ಸುರೇಶ್ ಅಮಿನ್ ವಂದಿಸಿದರು.

ಸ್ವಚ್ಚತಾ ಸೇವೆಯಲ್ಲಿ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ದಳದ ವಿದ್ಯಾರ್ಥಿಗಳು, ಜಿಲ್ಲಾ ಪಂಚಾಯತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು , ಅಮಲ ಭಾರತ ಅಭಿಯಾನದ ಪದಾಧಿಕಾರಿಗಳು, ಅಮ್ಮನವರ ಭಕ್ತರು, ಯುವ ಘಟಕ ಅಯುಧ್ ನ ಯುವಕ ಯುವತಿಯರು ಸೇವೆಗೈದು ಬೆಂಗ್ರೆ ನದಿ ತೀರದಿಂದ ಸಮುದ್ರ ಕಿನಾರೆಯ ವಿಶಾಲ ಪ್ರದೇಶದಲ್ಲಿ , ಶಾಲಾ ಆವರಣದಲ್ಲಿ ,ಬಾಲವನ ಉದ್ಯಾನ,ದೇವಸ್ಥಾನದ ಆವರಣಗಳಲ್ಲಿ ಸ್ವಚ್ಚತಾ ಸೇವೆಗೈದು ಪರಿಸರ ಸ್ವಚ್ಛ ಗೊಳಿಸಿದರು.

ಸುಮಾರು150ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ವಿವಿಧ ತಂಡಗಳಲ್ಲಿ ವಿವಿಧ ಸ್ಥಳಗಳಲ್ಲಿ ಸೇವೆಗೈದರು.ಸುಮಾರು10 ಕ್ಕೂಅಧಿಕ ಟಿಪ್ಪರ್ ಗಳಲ್ಲಿ ಈ ತ್ಯಾಜ್ಯಗಳನ್ನು ವಿಲೇವಾರಿಗಾಗಿ ಸಾಗಿಸಲಾಯಿತು.

Comments are closed.