ಕರಾವಳಿ

ಮಂಗಳೂರು : ಸಂಘನಿಕೇತನದಲ್ಲಿ 72ನೇ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರತಾಪ್ ನಗರ ಸಂಘನಿಕೇತನ ಇದರ 72ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ನಡೆಯಲಿದ್ದು , ಸೋಮವಾರ ಭಾದ್ರಪದ ಶುಕ್ಲ ಚೌತಿ ದಿನದಂದು ಶ್ರೀ ಮಹಾ ಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನೆಯು ಗೋ ಕಪಿಲಾಶ್ರಮ ಉತ್ತರಾಖಂಡ ದ ಶ್ರೀ ಶ್ರೀ ರಾಮಚಂದ್ರ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು.

ಪ್ರಾರಂಭದಲ್ಲಿ ಬೆಳಿಗ್ಗೆ ಶ್ರೀ ಗಣೇಶ ದೇವರ ವಿಗ್ರಹ ಭವ್ಯ ಮೆರವಣಿಗೆಯಲ್ಲಿ ತರಲಾಯಿತು ಧ್ವಜಾರೋಹಣ ವಂದೇ ಮಾತರಂ ಬಳಿಕ ಗಣಹೋಮ , ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು.

ಸಾಯಂಕಾಲ ಬಹುಮಾನ ವಿತರಣೆ ರಾತ್ರಿ ಮುದಗಣಪತಿ ಸೇವೆ , ರಂಗ ಪೂಜೆ ಸಾವಿರಾರು ಭಜಕರ ಸಮ್ಮುಖದಲ್ಲಿ ನಡೆಯಿತು .

ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಂದ್ರಶೇಖರ್ ಭಂಡಾರಿ , ಡಾ. ವಾಮನ್ ಶೆಣೈ, ಪಿ ಯಸ್ ಪ್ರಕಾಶ್, ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಅಧ್ಯಕ್ಷ ಕೆ ಪ್ರವೀಣ್ ಕುಮಾರ್, ಜೆ ಕೆ ರಾವ್ , ಬಾಲಕೃಷ್ಣ ಕೊಟ್ಟಾರಿ, ಕೆ ಪಿ ಟೈಲಾರ್, ಸತೀಶ್ ಪ್ರಭು, ಜೀವನ್ ರಾಜ್ ಶೆಣೈ, ಭರಥರಾಜ್, ಹರ್ಷವರ್ಧನ್ ಸುರೇಶ ಕಾಮತ್ ಉಪಸ್ಥಿತರಿದ್ದರು .

ಚಿತ್ರ: ಮಂಜು ನೀರೇಶ್ವಾಲ್ಯ

Comments are closed.