ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಸ್ರೂರು ಮೂರುಕೈ ಅಂಡರ್ ಪಾಸ್ ಬಳಿಯಲ್ಲಿನ ವಡೇರ ಹೋಬಳಿಯ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಯಂತ್ರವನ್ನು ಸ್ಕಿಮ್ಮಿಂಗ್ ಉಪಕರಣದ ಮೂಲಕ ಹ್ಯಾಕರ್ಸ್ ಗಳು ಹ್ಯಾಕ್ ಮಾಡಿದ ಆತಂಕಕಾರಿ ಅಂಶ ಬಯಲಿಗೆ ಬಂದಿದೆ. ಗ್ರಾಹಕರು ತಮ್ಮ ಎಟಿಎಂ ಕಾರ್ಡಿನ ರಹಸ್ಯ ಸಂಖ್ಯೆಯನ್ನು (ಸೆಕ್ಯೂರಿಟಿ ಪಿನ್ ನಂಬರ್) ಬದಲಾಯಿಸಲು ಉಡುಪಿ ಸೆನ್ ಅಪರಾಧ ಠಾಣೆ ಪೊಲೀಸರು ಸೂಚಿಸಿದ್ದಾರೆ.

(ಸಾಂದರ್ಭಿಕ ಚಿತ್ರ)
ಜುಲೈ25 ರಿಂದಆ.5 ರ ಅವಧಿಯಲ್ಲಿ ಬಹಳಷ್ಟು ಗ್ರಾಹಕರ ಹಣವನ್ನು ಅವರಿಗೆ ಅರಿವಿಲ್ಲದಂತೆಯೇ ಲಪಟಾಯಿಸಲಾಗಿದೆ. ಸುಮಾರು ಹತ್ತು ದಿನಗಳ ಅಂತರದಲ್ಲಿ ಅಪರಿಚಿತ ವ್ಯಕ್ತಿ ಈ ಎಟಿಎಂ ಕೇಂದ್ರಕ್ಕೆ ಬಂದು ಅಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಗ್ರಾಹಕರ ಹಣವನ್ನು ಹ್ಯಾಕ್ ಮಾಡಿ ಡ್ರಾ ಮಾಡಿಕೊಂಡಿದ್ದಾರೆ. ಎಟಿಎಂ ಕೇಂದ್ರದಲ್ಲಿ ಸ್ಕಿಮ್ಮಿಂಗ್ ಯಂತ್ರವಿಡುತ್ತಿರುವುದನ್ನು ಸಿಸಿ ಕ್ಯಾಮಾರದಲ್ಲಿ ಪರಿಶೀಲಿಸಿಸ್ದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಹಂಗಳುರು ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿದ ಗ್ರಾಹಕರು ಕೂಡಲೇ ತಮ್ಮ ಎಟಿಎಂ ಪಿನ್ ಬದಲಾಯಿಸಲು ಸೂಚಿಸಲಾಗಿದೆ.
ಹಲವು ಮಂದಿಯಿಂದ ದೂರು…
ಕೆಲವು ದಿನಗಳ ಹಿಂದೆ ರಾತ್ರಿ ಸಮಯ ಮಹೇಶ್ ಪೂಜಾರಿ ಎನ್ನುವರ ಖಾತೆಯಿಂದ ಸುಮಾರು 8 ಸಾವಿರ ಹಣ ಡ್ರಾ ಆಗಿತ್ತು. ಮರುದಿನ ವಿಚಾರ ತಿಳಿದು ಅವರು ಬ್ಯಾಂಕಿಗೆ ತೆರಳಿ ಮಾಹಿತಿ ನೀಡಿದ್ದು ಬಳಿಕ ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದರು. ಅಷ್ಟರಲ್ಲಾಗಲೇ ಬ್ಯಾಂಕ್ ಹಾಗೂ ಸೆನ್ ಠಾಣೆಗೆ ದೂರಿನ ಮೇಎ ದೂರು ಬರಲಾರಂಭಿಸಿತು. ಬಹಳಷ್ಟು ಗ್ರಾಹಕರು ಲಕ್ಷಾಂತರ ರೂ. ಹಣ ಕಳೆದ್ಕೊಂಡಿರುವುದು ಗಮನಕ್ಕೆ ಬಂದಿತ್ತು.
ಎಂಟಿಎಂ ಕೇಂದ್ರಕ್ಕೆ ಸ್ಕಿಮ್ಮಿಂಗ್ ಉಪಕರಣವನ್ನು ದಿನದ ಬೇರೆಬೇರೆ ಸಮಯದಲ್ಲಿ ಅಳವಡಿಸುತ್ತಿದ್ದ ಖದೀಮರು ಕೆಲ ಸಮಯದ ಬಳಿಕ ಅದನ್ನು ಕೊಂಡೊಯ್ದು ಅಜ್ನಾತ ಸ್ಥಳದಲ್ಲಿ ಹಣವನ್ನು ಗ್ರಾಹಕರ ಅರಿವಿಗೂ ಬಾರದಂತೆ ಡ್ರಾ ಮಾಡಿದ್ದು ಬೆಳಕಿಗೆ ಬಂದಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.