ಕುಂದಾಪುರ: ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಕೊರವಡಿ ಮಾಸ್ತಿ ತಾಂಡೇಲ ರಸ್ತೆಯ ಅರಬ್ಬಿ ಸಮುದ್ರ ತೀರದಲ್ಲಿ ಸುಮಾರು 35 ರಿಂದ 45 ವರ್ಷ ಪ್ರಾಯದ ಒಂದು ಅಪರಿಚಿತ ಗಂಡಸಿನ ಮೃತ ಶರೀರವು ಶುಕ್ರವಾರ ಪತ್ತೆಯಾಗಿದೆ.

ಮೃತ ದೇಹವು ಊದಿಕೊಂಡಿದ್ದು ಮುಖವು ಜಲಚರಗಳಿಂದ ತಿಂದಿರುವುದು ಗೋಚರಿಸುತ್ತಿದೆ. ಮೃತರ ವಾರೀಸುದಾರರು ಪತ್ತೆಯಾಗದೇ ಇದ್ದು ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪತ್ತೆಗೆ ಸಹಕರಿಸಲು ಪೊಲೀಸರು ವಿನಂತಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತನ ಚಹರೆ: ಸುಮಾರು 5.5 ಅಡಿ ಎತ್ತರ, ನಸು ಬಿಳಿ ಮೈ ಬಣ್ಣ, 3/4 ಆರ್ಮಿ ಚಡ್ಡಿ ಧರಿಸಿದ್ದು, ಕಡು ನೀಲಿ ಬಣ್ಣದ ಅರ್ಧ ತೋಳಿನ ಟಿ ಶರ್ಟ್ ತೊಟ್ಟಿದ್ದಾನೆ.
ಸಂಪರ್ಕಿಸಬೇಕಾದ ನಂಬರ್
ಕುಂದಾಪುರ ಪೋ.ಠಾ.08254-230338
9480805455
Comments are closed.