ಕರಾವಳಿ

ಉಗ್ರರ ಶೋಧ : ನಗರದ ಲಾಡ್ಜ್‌ನಲ್ಲಿದ್ದ ಅನುಮಾನಾಸ್ಪದ 9 ಮಂದಿ ಬಂಧನ : ತೀವ್ರ ವಿಚಾರಣೆ

Pinterest LinkedIn Tumblr

ಮಂಗಳೂರು,ಆಗಸ್ಟ್.16 : ದೇಶದೊಳಗೆ ಉಗ್ರರು ನುಸುಳಿರುವ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ನಗರದಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದ ಸಂದರ್ಭ 9 ಮಂದಿ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿದ್ದು, ಇವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉಗ್ರರ ನುಸುಳಿಕೆ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ತೀವ್ರ ಕಟ್ಟೇಚ್ಚರ ವಹಿಸಲಾಗಿದೆ. ಅದರಂತೆ ಮಂಗಳೂರು ಪೊಲೀಸರು ಶುಕ್ರವಾರ ರಾತ್ರಿ ನಗರದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ನಗರದ ಪಂಪ್ ವೆಲ್ ಸಮೀಪದ ಲಾಡ್ಜ್ ವೊಂದರಲ್ಲಿ ಅನುಮಾನಾಸ್ಪದ 9 ಮಂದಿ ಪತ್ತೆಯಾಗಿದ್ದಾರೆ.

ಇದೇ ವೇಳೆ ಅದೇ ಲಾಡ್ಜ್ ಹೊರಗೆ ನ್ಯಾಶನಲ್ ಕ್ರೈಮ್ ಇನ್ವಿಶ್ಟಿಗೇಶನ್ ಬ್ಯೂರೋ ಎಂಬ ಫಲಕವಿರುವ ಕಾರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಾರು ಸಹಿತಾ ಲಾಡ್ಜ್ ನಲ್ಲಿ ಪತ್ತೆಯಾಗಿರುವ 9 ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರ ವಿಶೇಷ ತಂಡವು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಶಕ್ಕೆ ಪಡೆದವರ ಪೈಕಿ ಮಡಿಕೇರಿ, ಕೇರಳ ಮತ್ತು ಮಂಗಳೂರು ಮೂಲದ ನಿವಾಸಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ನ್ಯಾಶನಲ್ ಕ್ರೈಮ್ ಇನ್ವೆಶ್ಟಿಗೇಶನ್ ಬ್ಯೂರೋ-ಗಾವರ್ನ್ ಮೆಂಟ್ ಆಫ್ ಇಂಡಿಯಾ ಎಂಬ ಫಲಕವಿರುವ ಕಾರಿನಲ್ಲಿ ಈ ವ್ಯಕ್ತಿಗಳು ಮಂಗಳೂರಿನ ಲಾಡ್ಜ್ ಗೆ ಬಂದಿದ್ದರು ಎಂದು ಹೇಳಲಾಗಿದ್ದು, ಈ ಬಗ್ಗೆ ಕೂಡ.ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಯಾವೂದೇ ಮಾಹಿತಿ ನೀಡಲು ಅಥಾವ ಖಚಿತ ಪಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.

Comments are closed.