ಕರಾವಳಿ

ನಾಳೆ 73ನೇ ಸ್ವಾಂತ್ರಂತ್ರೋತ್ಸವ : ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ ಮತ್ತು ಸಂದೇಶ

Pinterest LinkedIn Tumblr

ಮಂಗಳೂರು, ಆಗಸ್ಟ್.14: ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜ್ಯ ಸಚಿವ ಸಂಪುಟ ರಚನೆಯಾಗದೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಇನ್ನೂ ಕೂಡ ಆಗದೇ ಇರುವ ಹಿನ್ನೆಲೆಯಲ್ಲಿ ಪ್ರಸಕ್ತ 2019ನೇ ಸಾಲಿನ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆ.15ರಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡುವಂತೆ ರಾಜ್ಯ ಸರಕಾರ ಮಂಗಳವಾರ ನೂತನ ಆದೇಶ ಹೊರಡಿಸಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಧ್ವಜಾರೋಹಣ ನೆರವೇರಿಸಿದರೆ, ಉಪ ವಿಭಾಗಗಳಲ್ಲಿ ಉಪವಿಭಾಗಾಧಿಕಾರಿಗಳು ಮತ್ತು ತಾಲೂಕು ಗಳಲ್ಲಿ ತಹಶೀಲ್ದಾರ್‌ರು ಧ್ವಜಾರೋಹಣ ನೆರವೇರಿಸಲು ಸೂಚಿಸಿದೆ. ಪ್ರಸ್ತುತ ರಾಜ್ಯದಲ್ಲಿನ ಬಹುತೇಕ ಜಿಲ್ಲೆಗಳಲ್ಲಿ ನೆರೆಯ ಕಾರಣ ದಿಂದಾಗಿ ಸ್ವಾತಂತ್ರ ದಿನಾಚರಣೆಯನ್ನು ಸರಳವಾಗಿ ಆಚರಿಸಲು ಆದೇಶಿಸಿದೆ.

ಇದುವರೆಗೆ ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರಿಂದಲೇ ಧ್ಜಜಾರೋಹಣ ನಡೆಯುತ್ತಿತ್ತು. ಅದರೆ ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಬಿ.ಎಸ್. ಯಡಿಯೂರಪ್ಪ ಅವರು ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಲ್ಲಿಯವರೆಗೂ ರಾಜ್ಯ ಸಚಿವ ಸಂಪುಟ ರಚನೆಯಾಗದ ಕಾರಣ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯೇ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ.

ದ.ಕ. ಜಿಲ್ಲೆಯಲ್ಲಿ ದಿನಾಂಕ 15.08.2019 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ದಿನಾಚರಣೆ ನೆಹರು ಮೈದಾನದಲ್ಲಿ ನಡೆಯಲಿದ್ದು, ದ.ಕ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ರವರು ಧ್ವಜಾರೋಹಣ ಮತ್ತು ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದಾರೆ.

ಸ್ವಾಂತಂತ್ರ್ಯೋತ್ಸವ : ಮಧ್ಯಾಹ್ನದ ಕಾರ್ಯಕ್ರಮಗಳ ವಿವರ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತುಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯಿಂದ ಸ್ವಾಂತಂತ್ರ್ಯೋತ್ಸವ ಕವಿಗೋಷ್ಠಿ-ಸಾಂಸ್ಕೃತಿಕ ಸಂಭ್ರಮಮಂಗಳೂರು ಪುರಭವನದಲ್ಲಿ ಆಗಸ್ಟ್15 ಗುರುವಾರ ದಂದು 73ನೇ ಸ್ವಾಂತ್ರಂತ್ರೋತ್ಸವದ ಪ್ರಯುಕ್ತ ಮಂಗಳೂರು ಪುರಭವನದಲ್ಲಿ‌ಅಪರಾಹ್ನ 3ರಿಂದ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ , ಕನ್ನಡ ಮತ್ತು ಸಂಸ್ಕೃತಿ‌ಇಲಾಖೆಯ ವತಿಯಿಂದ, ಸ್ವಾತಂತ್ರೋತ್ಸವ ಸಂದೇಶ ಕವಿಗೋಷ್ಠಿ ಗೌರವ ಪ್ರದಾನ-ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

ಕಾರ್ಯಕ್ರಮವನ್ನು ಡಾ. ವಸಂತ ಕುಮಾರ ಪೆರ್ಲ‌ ಉದ್ಘಾಟಿಸಲಿದ್ದು. ಜಿಲ್ಲಾಕನ್ನಡ ಸಾಹಿತ್ಯ‌ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ‌ ಅಧ್ಯಕ್ಷತೆ ವಹಿಸಲಿರುವರು.

ಜಿಲ್ಲಾ ಪೊಲೀಸ್‌ಇಲಾಖೆಯ ವತಿಯಿಂದ ಪೊಲೀಸ್ ಬ್ಯಾಂಡ್‌ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ವಸಂತ್‌ಕುಮಾರ್‌ ಪೆರ್ಲರವರ‌ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

ಭಾಗವಹಿಸುವ ಕವಿಗಳು : ಅಕ್ಷಯ‌ಆ ರ್. ಶೆಟ್ಟಿ, ಮಂಗಳೂರು, ಸೋಮನಿಂಗ ಹೆಚ್. ಹಿಪ್ಪರಗಿ, ನಾಗರಾಜ್‌ಖಾರ್ವಿಕಲ್ಮಂಜಿ, ಜಯಶ್ರೀ ಬಿ. ಕದ್ರಿ , ಮಂಗಳೂರು, ಮರಿಯನ್ ಪಿಯುಸ್ ಡಿ’ಸೋಜ, ಸುರತ್ಕಲ್, ರಾಜೇಶ್ ಶೆಟ್ಟಿದೋಟ, ಮಂಗಳೂರು, ಕೆ.ಪಿ. ಅಬ್ದುಲ್‌ ಖಾದರ್‌ ಕುತ್ತೆತ್ತೂರು.

ಆ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕೆನರಾ‌ಅಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಉರ್ವ‌ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕವೈವಿಧ್ಯಮಯಕಾರ್ಯಕ್ರಮ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಸಾಂಸ್ಕೃತಿ ಕಕಾರ್ಯಕ್ರಮ ಜರಗಲಿರುವುದು.

ಕನ್ನಡ ಮತ್ತು ಸಂಸ್ಕೃತಿ‌ಇಲಾಖೆಯ ವತಿಯಿಂದ ಪುತ್ತೂರುಜಗದೀಶ‌ಆಚಾರ್ಯ ಮತ್ತು ಬಳಗ ಇವರಿಂದದೇಶ ಭಕ್ತಿಗೀತಾ ಗಾನ ಸಂಭ್ರಮಕಾರ್ಯಕ್ರಮಜರಗಲಿವೆ ಎಂದುದಕ್ಷಿಣಕನ್ನಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿರುವರು.

Comments are closed.