ಕರಾವಳಿ

ಭಾರೀ ಗಾಳಿ ಮಳೆ ಸಾಧ್ಯತೆ: ಉಡುಪಿಯಲ್ಲಿ ಆ.15 ಗುರುವಾರ `ರೆಡ್ ಅಲರ್ಟ್’

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾದ್ಯಂತ ನಿರಂತರ ಪಳೆಯಾಗುತ್ತಿದ್ದು ಕರ್ನಾಟಕ ಕರಾವಳಿಯಲ್ಲಿ ಆ.15 ಗುರುವಾರ ಭಾರಿ ಮಳೆ(205 ಮೀಮೀ) ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಬಾರೀ ಗಾಳಿ ಬೀಸುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಹವಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆತಂತೆ ಉಡುಪಿ ಜಿಲ್ಲೆಯಾಧ್ಯಂತ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸೂಚನೆಗಳೇನು?
* ಮುಂದಿನ ಮೂರು ದಿನಗಳ ಕಾಲ ಸಮುದ್ರ ಹಾಗೂ ನದಿಗಳಲ್ಲಿ ಮೀನುಗಾರರು ಕಡ್ಡಾಯವಾಗಿ ಹಡಗು, ದೋಣಿಗಳು ಇಳಿಯದಂತೆ ಸೂಚನೆ ನೀಡಲಾಗಿದೆ.
*ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ದಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಮೊಬೈಲ್ ಕಚೇರಿ ದೂರವಾಣಿ, ವಾಹನ ಅಗತ್ಯ ಪರಿಕ್ರಮಗಳನ್ನು ಸನ್ನದ್ಧರಾಗಿಡಬೇಕು.
*ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರ ಪ್ರದೇಶಗಳಿಗೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸಲು ಸೂಚಿಸಲಾಗಿದೆ. ಜಲಾವ್ರತವಾಗುವ ಪ್ರದೇಶಗಳಲ್ಲಿ ಇರುವ ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಹಿರಿಯ ನಾಗರಿಕರು, ಹಾಗೂ ಚಿಕ್ಕ ಮಕ್ಕಳನ್ನು ಮೊದಲೇ ಸುರಕ್ಷಿತ ಪ್ರದೇಶಕ್ಕೆ ಕರೆತರುವುದು.
*ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಕವಾಗಿರುವ ನೋಡಲ್ ಅಧಿಕಾರಿಗಳು ಅಲರ್ಟ್ ಆಗಿದ್ದು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದನೆ ನೀಡಬೇಕು, ನದಿ ಹಾಗೂ ಡ್ಯಾಂಗಳ ನೀರಿನ ಮಟ್ಟದ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.
*ಸಾರ್ವಜನಿಕರು ಮತ್ತು ಪ್ರವಾಸಿಗರು ಸಮುದ್ರ ತೀರಕೆ ತೆರಳದಂತೆ ಎಚ್ಚರಿಕೆ.

ಭಾರಿ ಮಳೆಯ ಹಿನ್ನಲೆಯಲ್ಲಿ ತುರ್ತು ಸೇವೆಗಾಗಿ ಟೋಲ್‌ ಫ್ರೀ ಸಂಖ್ಯೆ ನೀಡಲಾಗಿದೆ. ತುರ್ತು ಸೇವೆಯ ಕಂಟ್ರೋಲ್‌ ರೂಮ್‌ 24*7 ಕಾರ್ಯನಿರ್ವಹಿಸಲಿದೆ.

ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ: 1077
ದೂರವಾಣಿ ಸಂಖ್ಯೆ: 0820-2574802

Comments are closed.