ಪ್ರಮುಖ ವರದಿಗಳು

ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾದ ವಿಂಗ್‌ ಕಮಾಂಡರ್ ಅಭಿನಂದನ್‌ ವರ್ಧಮಾನ್‌

Pinterest LinkedIn Tumblr

ಹೊಸದಿಲ್ಲಿ: ಭಾರತದ ವೀರಪುತ್ರ ಎಂದೇ ಪ್ರಸಿದ್ಧರಾದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಯುದ್ಧಕಾಲದಲ್ಲಿ ಅಪ್ರತಿಮ ಸಾಹಸ ಪ್ರದರ್ಶನಕ್ಕೆ ನೀಡಲಾಗುವ ಮೂರು ಶ್ರೇಷ್ಠ ಪುರಸ್ಕಾರಗಳ ಪೈಕಿ ವೀರಚಕ್ರವೂ ಒಂದಾಗಿದ್ದು, 73ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಅವರಿ ಪುರಸ್ಕಾರ ನೀಡಲಾಗುತ್ತದೆ.

ಫೆಬ್ರವರಿಯಲ್ಲಿ ಪಾಕ್‌ ವಿರುದ್ಧ ಬಾಲಕೋಟ್‌ ಭಾಗದಲ್ಲಿ ನಡೆಸಿದ ವಾಯುದಾಳಿಯಲ್ಲಿ ವಿಂಗ್‌ ಕಮಾಂಡ್‌ ಅಭಿನಂದನ್‌ ಪಾಕಿಸ್ತಾನದ ಎಫ್‌-16 ವಿಮಾನವನ್ನು ಹೊಡೆದುರುಳಿಸಿದ್ದರು.

2018ರಲ್ಲಿ ಕುಲ್ಗಾಮ್‌ನಲ್ಲಿ ನಡೆದ ಉಗ್ರರೊಂದಿಗೆ ಕಾಳಗದಲ್ಲಿ ಹುತಾತ್ಮರಾದ ಸಪ್ಪರ್‌ ಪ್ರಕಾಶ್‌ ಜಾಧವ್‌, ಸಿಆರ್‌ಪಿಎಫ್‌ ಡೆಪ್ಯುಟಿ ಕಮಾಂಡೆಂಟ್‌ ಹರ್ಷಪಾಲ್‌ ಸಿಂಗ್‌ ಸಿಂಗ್‌ ಕೀರ್ತಿ ಚಕ್ರ ಪದಕ ಪುರಸ್ಕಾರ(ಮರಣೋತ್ತರ) ಘೋಷಣೆ ಮಾಡಲಾಗಿದೆ. ಇದಲ್ಲದೆ 14 ಮಂದಿಗೆ ಶೌರ್ಯ ಚಕ್ರ ಪದಕ ನೀಡಲಾಗುತ್ತದೆ.

ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್‌ ಲೀಡರ್‌ ಮಿಂಟಿ ಅಗರ್ವಾಲ್‌ ಯುದ್ಧ ಸೇವಾ ಪದಕಕ್ಕೆ ಭಾಜನರಾಗಿದ್ದು, ಬಾಲಕೋಟ್‌ನಲ್ಲಿ ವಾಯುದಾಳಿ ನಡೆಸಿ, ಜೈಷ್‌-ಎ- ಮೊಹಮ್ಮದ್‌ ಉಗ್ರ ಸಂಘಟನೆಯ ಅಡಗುದಾಣಗಳಿಗೆ ಬಾಂಬ್‌ ದಾಳಿ ನಡೆಸಿದ ಮಿಗ್‌2000 ಪೈಲಟ್‌ಗಳಿಗೆ ವಾಯುಸೇನಾ ಪದಕಗಳನ್ನು ಘೋಷಣೆ ಮಾಡಲಾಗಿದೆ.

ಪುಲ್ವಾಮಾ ದಾಳಿ ಬಳಿಕ ಪಾಕ್‌ ಆಕ್ರಮಿತ ಪ್ರದೇಶದ ಭಾಗದಲ್ಲಿದ್ದ ಬಾಲಕೋಟ್‌ನಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಅಡಗುದಾಣಗಳ ಮೇಲೆ ಭಾರತ ವಾಯುದಾಳಿ ನಡೆಸಿತ್ತು. ಈ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಪಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಫೆ.27ರಂದು ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನ ವಾಯುಗಡಿ ಉಲ್ಲಂಘಿಸಿತ್ತು. ಈ ವೇಳೆ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌, ಮಿಗ್‌-21 ಯುದ್ಧ ವಿಮಾನದ ಮೂಲಕ ಹಿಮ್ಮೆಟ್ಟಿಸಿದರಲ್ಲದೆ, ಎಫ್‌-16 ಹೊಡೆದುರುಳಿಸಿ, ಹೊಸ ದಾಖಲೆಯನ್ನೇ ಸೃಷ್ಟಿಸಿದ್ದರು. ಈ ವೇಳೆ ಪಾಕ್‌ ದಾಳಿಗೆ ತುತ್ತಾದ ಅಭಿನಂದನ್‌ ಅವರ ಫೈಟರ್‌ ಜೆಟ್‌ ಪತನಗೊಂಡು ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕಿದ್ದರು. 60 ಗಂಟೆಗಳ ಕಾಲ ಪಾಕ್‌ ವಶದಲ್ಲಿದ್ದರು.

Comments are closed.