ಕರಾವಳಿ

ಮಣಿಪಾಲದಲ್ಲಿ ಬೈಕ್ ಅಡ್ಡಗಟ್ಟಿ ನಗ-ನಗದು ಸುಲಿಗೆ; ಐವರು ಅಂದರ್- ಬಯಲಾಯ್ತು ಚುಡಾವಣೆ ಪ್ರಕರಣ!

Pinterest LinkedIn Tumblr

ಉಡುಪಿ: ಕಳೆದ ಮೂರು ದಿನಗಳ ಹಿಂದೆ ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಸಗ್ರಿ ಶಾಲೆಗೆ ಹೋಗುವ ರಸ್ತೆಯಲ್ಲಿ ಯಾರೋ ಅಪರಿಚಿತರು ಬೈಕಿನಲ್ಲಿ ಹೋಗುತ್ತಿದ್ದ ಮೂಡುಸಗ್ರಿ ನಿವಾಸಿಯಾದ ನರಸಿಂಹ ನಾಯಕ್ ಎಂಬವರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾಪು ವಿನೋಬಾನಗರ ನಿವಾಸಿ ಆತೀಶ್ ಡಿಸಿಲ್ವಾ(22), ಕಟಪಾಡಿ ಕುರ್ಕಾಲ್ ನಿವಾಸಿ ಪ್ರೇಮನಾಥ್ @ ರೇವ್(19) , ತೆಂಕನಿಡಿಯೂರು ನಿವಾಸಿ ಯೊಗೀಶ್(19), ಬ್ರಹ್ಮಾವರ ಆರೂರು ನಿವಾಸಿ ಸಂದೇಶ್(18) ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸಹಿತ ಒಟ್ಟು 5 ಜನ ಆರೋಪಿತರನ್ನು ಬಂಧಿಸಿದ್ದು ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕೆ.ಟಿ.ಎಂ ಬೈಕ್ 1, ಡಿ.ವೋ ಸ್ಕೂಟರ್ 1 ಹಾಗೂ ವಿವೋ ಮೊಬೈಲ್ ಹಾಗೂ ನರಸಿಂಹ ನಾಯಕ್ ಅವರ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಬಾಲಕಿ ಚುಡಾವಣೆ ಪ್ರಕರಣ ಬಯಲು!
ಬಂಧಿತರ ಪೈಕಿ ಈ ಪ್ರಕರಣದ ತನಿಖೆ ಸಮಯ ಮಣಿಪಾಲ ಠಾಣೆಗೆ ಸಂಬಂಧಿಸಿದ ಇನ್ನೊಂದು ಪ್ರಕರಣವಾದ ವಿದ್ಯಾರ್ಥಿನಿಗೆ ಲೈಂಗಿಕ ಚುಡಾವಣೆ ಪ್ರಕರಣವನ್ನು ತಾವೇ ಎಸಗಿದ್ದಾಗಿ ಬಂಧಿತ ಆರೋಪಿತರಾದ ಆತೀಶ್ ಡಿಸಿಲ್ವಾ, ಸಂದೇಶ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ತಿಳಿಸಿದ್ದಾನೆ ಎಮ್ದು ಪೊಲೀಸರು ತಿಳಿಸಿದ್ದಾರೆ.

ಅಂದು ನಡೆದಿದ್ದೇನು?
ಆ.9ರಂದು ರಾತ್ರಿ 01:15ಕ್ಕೆ ನರಸಿಹ ನಾಯಕ್ ತೆರಳುತ್ತಿದ್ದಾಗ ಅಪರಿಚ್ತರು ಅವರನ್ನು ಅಡ್ದಗಟ್ಟಿ ಪೊದೆಯಲ್ಲಿದ್ದ ಮರದ ಕೋಲಿನಿಂದ ಎಡಕಾಲಿಗೆ ಹೊಡೆದು ಅವರದೇ ಹೆಲ್ಮೆಟ್ ತೆಗೆದು ಹಣೆಯ ಎಡಭಾಗಕ್ಕೆ ಹೊಡೆದು ೨೪ ಗ್ರಾಂ ತೂಕದ ಸುಮಾರು 70,000/- ಮೌಲ್ಯದ ಚಿನ್ನದ ಸರ, ರೂಪಾಯಿ 29,000/- ಮೌಲ್ಯದ ಮೊಬೈಲ್ ಹಾಗೂ ಎ.ಟಿ.ಎಂ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಸಹಿತ ಸುಮಾರು 31,000/- ರೂಪಾಯಿ ನಗದು ಇದ್ದ ಪರ್ಸನ್ನು ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ನರಸಿಂಹ ನಾಯಕ್‌ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆ ತಂಡ…
ಆರೋಪಿಗಳ ಶೀಘೃ ಪತ್ತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಅರ್ ಜೈಶಂಕರ್‌ರವರ ಮಾಗದರ್ಶನದಂತೆ ಮಣಿಪಾಲ ಠಾಣಾ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಮಣಿಪಾಲ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಪೊಲೀಸ್ ಉಪನಿರೀಕ್ಷಕ ಶ್ರೀಧರ ನಂಬಿಯಾರ್, ಎ.ಎಸ್.ಐ ಉಮೇಶ್ ಜೋಗಿ, ದಿವಾಕರ್ ಶರ್ಮಾ, ಹಾಗೂ ಸಿಬ್ಬಂದಿಯವರಾದ ಅಬ್ದುಲ್ ರಜಾಕ್, ಪ್ರಸನ್ನ ಕುಮಾರ್, ಥೋಮ್ಸನ್, ಪ್ರವೀಣ, ಸಂತೋಷ, ಅದರ್ಶ ಹಾಗೂ ಜೀಪು ಚಾಲಕರಾದ ಸುರೇಶ್ ನಾಯ್ಕ, ಸುದೀಪ್, ಸತೀಶ್‌ರವರು ಭಾಗವಹಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.