ಕರಾವಳಿ

ಉಕ್ಕಿಹರಿಯುತ್ತಿರುವ ನೇತ್ರಾವತಿ : ಬಂಟ್ವಾಳದಲ್ಲಿ ಮಾಜಿ ಸಚಿವ ಪೂಜಾರಿ ಮನೆ ಜಲಾವೃತ – ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Pinterest LinkedIn Tumblr

ಮಂಗಳೂರು/ ಬಂಟ್ವಾಳ, ಆಗಸ್ಟ್.10: ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಭಾರೀ ಗಾಳಿ- ಮಳೆಯಿಂದಾಗಿ ನೇತ್ರಾವತಿ ನೀರಿನ ಮಟ್ಟ ತೀವ್ರ ಹೆಚ್ಚಾಗಿದ್ದು, ಅಪಾಯಕಾರಿಯಾಗಿ ಹರಿಯುತ್ತಿದೆ.

ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬಂಟ್ವಾಳ ಪರಿಸರದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದೆ. ಇದೇ ವೇಳೆ ನೇತ್ರಾವತಿಯಲ್ಲಿ ಉಕ್ಕಿಹರಿಯುತ್ತಿರುವ ಪ್ರವಾಹದಿಂದ ಬಂಟ್ವಾಳದ ಭಂಡಾರಿಬೆಟ್ಟುವಿನಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಮನೆ ಜಲಾವೃತವಾಗಿದೆ.

ಧಾರಾಕರ ಮಳೆಯಿಂದ ನೇತ್ರಾವತಿ ನೀರಿನ ಮಟ್ಟ ತೀವ್ರ ಹೆಚ್ಚಾಗಿದ್ದು, ಬಂಟ್ವಾಳ ಸುತ್ತಮುತ್ತ ಪರಿಸರದಲ್ಲಿ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ಇದೇ ವೇಳೆ ನೇತ್ರಾವತಿ ಪ್ರವಾಹದಿಂದ ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟುವಿನಲ್ಲಿರು ಬಿ.ಜನಾರ್ದನ ಪೂಜಾರಿಯವರ ಮನೆಗೂ ನೆರೆ ನುಗ್ಗಿದ್ದು, ಅವರನ್ನು ಹಾಗೂ ಅವರ ಮನೆಮಂದಿಯನ್ನು ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

Comments are closed.