ಕರಾವಳಿ

ಭಾರತದ ಅನರ್ಘ್ಯ ರತ್ನವೊಂದು ನಮ್ಮನ್ನು ಅಗಲಿದೆ :ಸುಷ್ಮಾ ಸ್ವರಾಜ್ ನಿಧನಕ್ಕೆ ಶಾಸಕ ಕಾಮತ್ ಸಂತಾಪ

Pinterest LinkedIn Tumblr

ಮಂಗಳೂರು : ಭಾರತೀಯ ಇತಿಹಾಸದಲ್ಲಿ ಮರೆಯಲಾರದ ಅನರ್ಘ್ಯ ರತ್ನವೊಂದು ನಮ್ಮನ್ನಗಲಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸುಷ್ಮಾ ಸ್ವರಾಜ್, ನೆರವಿಗಾಗಿ ಮೊರೆಯಿಟ್ಟವರಿಗೆ ಅಭಯ ಹಸ್ತ ಚಾಚಿದ ಮಹಾತಾಯಿ. ಆದರೆ ಈ ಮಾತೃ ಹೃದಯವು ಸ್ತಬ್ಧವಾಗಿದೆ. ನಿಜಕ್ಕೂ ಸುಷ್ಮಾ ಜೀ ಅವರ ಅಗಲಿಕೆ ಭಾರತಕ್ಕೆ ತುಂಬಲಾರದ ನಷ್ಟವೇ ಸರಿ. ಅತ್ಯುತ್ತಮ ಸಂಸದೆಯಾಗಿದ್ದ ಸುಷ್ಮಾ ಸ್ವರಾಜ್ ಅವರು ಪಕ್ಷದಲ್ಲಿ ಮೆಚ್ಚುಗೆ, ಗೌರವವನ್ನು ಪಡೆದಿದ್ದರು. ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಅಪಾರವಾದದ್ದು ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಕರಾವಳಿ ಮೂಲದ ಯುವಕರು ಕುವೈಟ್ ರಾಷ್ಟ್ರದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ‌ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ನನಗೆ ಬಹಳಷ್ಟು ಸಹಕಾರ ನೀಡಿದ್ದಾರೆ. ವಿಶ್ವದ ಯಾವುದೇ ಭಾಗದಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ ಸುಷ್ಮಾ ಅವರು ಸಹಾಯ ನೀಡದಿರುತ್ತಿರಲಿಲ್ಲ. ಅವರ ನೆರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಕ್ಷದ ಎಲ್ಲಾ ಕೆಲಸಗಳಲ್ಲಿಯೂ ಅತ್ಯಂತ ಕಾಳಜಿಯನ್ನು, ಶ್ರದ್ದೆಯನ್ನೂ ಹೊಂದಿದ್ದ ಸುಷ್ಮಾ ಸ್ವರಾಜ್ ಅಗಲಿಕೆ ದೇಶಾದ್ಯಂತ ಜನರಿಗೆ ಆಘಾತವನ್ನುಂಟುಮಾಡಿದೆ ಎಂದು ಹೇಳಿದರು.

Comments are closed.