ಕರಾವಳಿ

ಅಭೂತಪೂರ್ವ, ಐತಿಹಾಸಿಕ ನಿರ್ಧಾರ -ದೇಶವಿರೋಧಿ ಶಕ್ತಿಗಳಿಗೆ ಸ್ಪಷ್ಟ ಸಂದೇಶ ; ಕ್ಯಾ.ಕಾರ್ಣಿಕ್

Pinterest LinkedIn Tumblr

ಮಂಗಳೂರು : ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕುರಿತಾದ ಈ ಐತಿಹಾಸಿಕ ನಿರ್ಧಾರದ ನಂತರ ಭಾರತವು ಮೊದಲ ಬಾರಿಗೆ ನಿಜವಾದ ಅರ್ಥದಲ್ಲಿ ಪೂರ್ಣ ಗಣರಾಜ್ಯವಾಗಿದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಭಯೋತ್ಪಾದಕರು – ಪ್ರತ್ಯೇಕತಾವಾದಿಗಳೂ ಸೇರಿದಂತೆ ಎಲ್ಲ ರೀತಿಯ ದೇಶವಿರೋಧಿ ಶಕ್ತಿಗಳಿಗೆ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಹಾಗೂ ಯಾವುದೇ ರೀತಿಯ ತಂತ್ರಗಳಿಂದಲೂ ಭಾರತದ ಸಮಗ್ರತೆಗೆ ಧಕ್ಕೆ ತರಲು ಸಾಧ್ಯವಾಗಲಾರದು ಎಂಬ ಸ್ಪಷ್ಟ ಸಂದೇಶವು ಈ ಕ್ರಮದಿಂದಾಗಿ ರವಾನೆಯಾಗಿದೆ.

ಏಕ್ ದೇಶ್ ಮೆ ದೋ ವಿಧಾನ್, ದೋ ನಿಶಾನ್, ದೋ‌ ಪ್ರಧಾನ್ ನಹಿ‌ ಚಲೇಗಾ – ನಹಿ‌ ಚಲೇಗಾ ಎಂಬ ಡಾ|| ಶ್ಯಾಮಪ್ರಸಾದ ಮುಖರ್ಜಿಯವರ ಆಂದೋಲನಕ್ಕೆ ನಿಜವಾಗಿಯೂ ನ್ಯಾಯ ಸಿಕ್ಕಿದ‌ ಅಭೂತಪೂರ್ವ ಐತಿಹಾಸಿಕ ಕ್ಷಣವಿದು.

ರಾಷ್ಟ್ರದ ರಕ್ಷಣೆ ಹಾಗೂ ಒಕ್ಕೂಟದ ವ್ಯವಸ್ಥೆಯ ವಿಚಾರದಲ್ಲಿ ಅತ್ಯಂತ ದಿಟ್ಟ ಕ್ರಮ ಕೈಗೊಂಡ ಸನ್ಮಾನ್ಯ ನರೇಂದ್ರ ಮೋದಿಯವರನ್ನು ಹಾಗೂ ಸನ್ಮಾನ್ಯ ಅಮಿತ್ ಶಾ ಅವರನ್ನು ಸಮಸ್ತ ಜನ ಸಮೂಹ ಇಂದು ಒಕ್ಕೊರಲಿನಿಂದ ಅಭಿನಂದಿಸುತ್ತಿದೆ ಎಂದವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಏಕ್ ಭಾರತ್ – ಶ್ರೇಷ್ಠ್ ಭಾರತ್’..    ಜೈ ಹಿಂದ್… : ಕ್ಯಾ| ಕಾರ್ಣಿಕ್

Comments are closed.