ಕರಾವಳಿ

ಮಂಗಳೂರಿನಿಂದ ಪೂನಾಕ್ಕೆ ಪ್ರಯಾಣಿಸುವ ಯಾನಿಗಳಿಗೆ ಕೆಎಸ್‌ಆರ್‌ಟಿಸಿಯಿಂದ ಐಷಾರಾಮಿ ಕೊಡುಗೆ

Pinterest LinkedIn Tumblr

ಮಂಗಳೂರಿನಿಂದ ಪೂನಾಕ್ಕೆ ಅಂಬಾರಿ ಡ್ರೀಮ್‌ ಕ್ಲಾಸ್‌ ಮಲ್ಲಿ ಆ್ಯಕ್ಸೆಲ್‌ ಎ.ಸಿ. ಸ್ಲೀಪರ್‌

ಮಂಗಳೂರು : ಮಂಗಳೂರಿನಿಂದ ಪೂನಾಕ್ಕೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಹೊಸ ಲಕ್ಸೂರಿ ಕೊಡುಗೆ ಯೊಂದನ್ನು ನೀಡಿದ್ದು, ಈ ಕೊಡುಗೆ ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್ಸ್‌ನಲ್ಲಿ ಪ್ರಯಾಣಿಸುವ’ ಪ್ರಯಾಣಿಕರ ಜರ್ನಿಯನ್ನು ಹಿತಕರವಾಗಿಸಲಿದೆ

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು – ಪುಣೆ ನಡುವೆ ಸಂಚರಿಸಲಿರುವ ಅಂಬಾರಿ ಡ್ರೀಮ್‌ ಕ್ಲಾಸ್‌ ಮಲ್ಲಿ ಆ್ಯಕ್ಸೆಲ್‌ ಎ.ಸಿ. ಸ್ಲೀಪರ್‌ ಮತ್ತು ಮಂಗಳೂರಿನಿಂದ ಕಾಸರ ಗೋಡಿಗೆ ಸಂಚರಿಸುವ ವೋಲ್ವೋ ಬಸ್‌ಗಳಿಗೆ ಶನಿವಾರ ಬಿಜೈ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಚಾಲನೆ ನೀಡಿದರು.

ಜನರ ಬೇಡಿಕೆಗೆ ಅನುಗುಣವಾಗಿ ಕೆಎಸ್ಸಾರ್ಟಿಸಿ ಮಹತ್ವದ ಹೆಜ್ಜೆ ಇರಿಸಿದೆ. ಕಾಸರಗೋಡು ಮಂಗಳೂರಿನ ಗಡಿ ಪ್ರದೇಶವಾದ ಕಾರಣ ಅಲ್ಲಿನ ವ್ಯಾಪಾರ, ವಹಿವಾಟುಗಳಿಗೆ ಇದರಿಂದ ಉಪಯೋಗ ವಾಗಲಿದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ದಿಂದ ಮಂಜೇಶ್ವರ, ಗೋವಾಕ್ಕೆ ಬಸ್‌ಗಳ ಬೇಡಿಕೆ ಇದ್ದು, ಅಧಿಕಾರಿಗಳು ಗಮನಹರಿಸಬೇಕು ಎಂದು ಈ ವೇಳೆ ಶಾಸಕ ಕಾಮಾತ್ ಹೇಳಿದರು.

ಮಂಗಳೂರು ವಿಭಾಗದಿಂದ ಇದೇ ಮೊದಲ ಬಾರಿಗೆ 14.2 ಮೀ. ಉದ್ದದ ವೋಲ್ವೋ ಸ್ಲೀಪರ್‌ ಬಸ್‌ ಪುಣೆಗೆ ಪ್ರಯಾಣ ಬೆಳೆಸಲಿದ್ದು, ಅಂಬಾರಿ ಡ್ರೀಮ್‌ ಬಸ್‌ ಹಲವಾರು ವೈಶಿಷ್ಟಗಳನ್ನು ಹೊಂದಿದೆ. ಸುಮಾರು ಒಂದು ಕೋಟಿ ರೂ. ವೆಚ್ಚದ ‘ಅಂಬಾರಿ ಡ್ರೀಮ್ ಕ್ಲಾಸ್’ ಮಲ್ಟಿ ಆಕ್ಸಿಲ್ ಸ್ಲೀಪರ್ ಬಸ್ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು-ಪೂನಾ ಮಧ್ಯೆ ಶೀಘ್ರವೇ ಸಂಚರಿಸಲಿದೆ.

‘ಆರಾಮವಾಗಿ ಮಗುವಿನಂತೆ ನಿದ್ರಿಸಿ’ ಎಂಬ ಸ್ಲೋಗನ್‌ನ ಮೂಲಕ ಜನಪ್ರೀಯವಾದ ಮಲ್ಟಿಆಕ್ಸಿಲ್ ಕ್ಲಬ್ ಕ್ಲಾಸ್ ಸೀಟರ್ ಬಸ್ ಹಾಗೂ ಶೌಚಾಲಯ ಹೊಂದಿರುವ ಫ್ಲೈ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಇನ್ನು ಮುಂದೆ ಅಂಬಾರಿ ಡ್ರೀಮ್ ಕ್ಲಾಸ್‌ನಲ್ಲಿ ‘ಕನಸಿನೊಂದಿಗೆ ಪ್ರಯಾಣಿಸುವ’ ಮೂಲಕ ಜರ್ನಿಯನ್ನು ಇನ್ನೂ ಹಿತಕರವಾಗಿಸಲಿದೆ.ಈ ಬಸ್‌ಗಳು ಶನಿವಾರದಿಂದ ಮಂಗಳೂರು-ಪೂನಾ ಮಧ್ಯೆ ಸಂಚರಿಸಲಿವೆ.

ಮಂಗಳೂರಿನಿಂದ ಪುಣೆಗೆ ತೆರಳುವ ಬಸ್‌ ಉಡುಪಿ, ಭಟ್ಕಳ, ಹೊನ್ನಾವರ, ಅಂಕೋಲ ಮಾರ್ಗವಾಗಿ ಸಂಚರಿಸುತ್ತದೆ. 1,350 ರೂ. ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಪ್ರತೀ ದಿನ ಸಂಜೆ 4 ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6.45ಕ್ಕೆ ಪುಣೆ ತಲುಪಲಿದೆ. ಅಲ್ಲಿಂದ ಸಂಜೆ 6.30ಕ್ಕೆ ಹೊರಟು ಮರು ಬೆಳಗ್ಗೆ 9.15ಕ್ಕೆ ಮಂಗಳೂರು ತಲುಪಲಿದೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಕೆ.ಎಂ. ಅಶ್ರಫ್‌ ಮಾಹಿತಿ ನೀಡಿದರು.

Comments are closed.