ಕರಾವಳಿ

ರಾಜ್ಯದ ಅಪವಿತ್ರ, ಅನಿಷ್ಟ ಮೈತ್ರಿ ಕೊನೆಗೊಂಡಿದೆ : ಮೋನಪ್ಪ ಭಂಡಾರಿ

Pinterest LinkedIn Tumblr

ಮಂಗಳೂರು : ರಾಜ್ಯದ ನೂತನ ಸಿಎಂ ಆಗಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮಂಗಳೂರಿನ ಪಿವಿಎಸ್ ಬಳಿ ಇರುವ ಬಿಜೆಪಿ ಕಚೇರಿ ಮುಂಭಾಗ ಸಂಭ್ರಮಾಚರಣೆ ನಡೆಯಿತು.‌

ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ತಕರ್ತರು ಬಿಜೆಪಿಯ ಧ್ವಜ ಹಿಡಿದುಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಪರ ಫಿರ್ ಏಕ್ ಬಾರ್ ಯಡಿಯೂರಪ್ಪ ಎಂದು ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಮೋನಪ್ಪ ಭಂಡಾರಿ, ರಾಜ್ಯದ ಅಪವಿತ್ರ, ಅನಿಷ್ಟ ಮೈತ್ರಿ ಕೊನೆಗೊಂಡಿದೆ. ಯಡಿಯೂರಪ್ಪ ಆಡಳಿತದಲ್ಲಿ ರಾಜ್ಯದಲ್ಲಿ ಮತ್ತೆ ಅಭಿವೃದ್ಧಿ ನಡೆಯಲಿದೆ ಎಂದು ಹೇಳಿದರು.

ಬಳಿಕ ಸಿಹಿ ಹಂಚಿಕೊಂಡು ಮುಖಂಡರು, ಕಾರ್ಯಕರ್ತರೆಲ್ಲರೂ ಸಂಭ್ರಮಪಟ್ಟರು.

Comments are closed.