ಕರಾವಳಿ

ಸೆ.7: ಮಂಗಳೂರಿನಲ್ಲಿ ‘ನಮ್ಮ ಅಬ್ಬಕ್ಕ’ ಸಾಂಸ್ಕೃತಿಕ ಸಂಭ್ರಮ

Pinterest LinkedIn Tumblr

ಮಂಗಳೂರು: ‘ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (VRANT) ವತಿಯಿಂದ ದ್ವಿತೀಯ ವರ್ಷದ ‘ನಮ್ಮ ಅಬ್ಬಕ್ಕ’ ಸಾಂಸ್ಕೃತಿಕ ಸಂಭ್ರಮವನ್ನು ಸೆ.7 ರಂದು ನಗರದ ಪುರಭವನದಲ್ಲಿ ಏರ್ಪಡಿಸಲಾಗಿದೆ ‘ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ತೊಕ್ಕೊಟ್ಟು ಶ್ರೀ ರತ್ನಂ ಸಭಾಂಗಣದಲ್ಲಿ ಜರಗಿದ ಪ್ರತಿಷ್ಠಾನದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಈ ವಿಚಾರ ಪ್ರಕಟಿಸಿದರು.

‘ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪ್ರಸಿದ್ಧ ಅರ್ಥಧಾರಿಗಳಿಂದ ‘ ವೀರ ನಾರಿ ಅಬ್ಬಕ್ಕ’ ಯಕ್ಷಗಾನ ತಾಳಮದ್ದಳೆ, ನಗೆ ಹಬ್ಬ, ದೇಶಭಕ್ತಿ ಗೀತ ಗಾಯನ ಇತ್ಯಾದಿ ಸಾಂಸ್ಕೃತಿಕ ಕಲಾಪಗಳನ್ನು ನಡೆಸಲಾಗುವುದು’ ಎಂದವರು ತಿಳಿಸಿದರು.

ಇದಲ್ಲದೆ ‘ನಮ್ಮ ಅಬ್ಬಕ್ಕ’ ಚಿಂತನ ಗೋಷ್ಠಿ,ಸಭಾಕಲಾಪ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

‘ವಿರಾಂಟ್’ ಸಂಚಾಲಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ,ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ , ಕೋಶಾಧಿಕಾರಿ ಪಿ.ಡಿ.ಶೆಟ್ಟಿ, ಪದಾಧಿಕಾರಿಗಳಾದ ಚಂದ್ರಹಾಸ ಅಡ್ಯಂತಾಯ, ನಿರ್ಮಲ್ ಕುಮಾರ್ ಭಟ್, ಅರುಣ್ ಉಳ್ಳಾಲ್, ಸತೀಶ್ ಸುರತ್ಕಲ್, ಆನಂದ ಶೆಟ್ಟಿ, ಗೀತಾ ಜ್ಯುಡಿತ್ ಸಲ್ದಾನ, ಪ್ರತಿಮಾ ಹೆಬ್ಬಾರ್, ವಿನುತಾ ನಾಯ್ಕ್ , ಶ್ಯಾಮಲಾ ರಾಜ್ ಮೊದಲಾದವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.

ಜತೆ ಕಾರ್ಯದರ್ಶಿ ತ್ಯಾಗಂ ಹರೇಕಳ ಸ್ವಾಗತಿಸಿದರು; ಸಾಂಸ್ಕೃತಿಕ ಸಂಚಾಲಕ ಕೆ.ಲಕ್ಷ್ಮೀ ನಾರಾಯಣ ರೈ ಹರೇಕಳ ವಂದಿಸಿದರು.

Comments are closed.