ಮಂಗಳೂರಿನ ಹಿರಿಯ ನ್ಯಾಯವಾದಿ ಶ್ರೀ ಸೀತಾರಾಮ್ ಶೆಟ್ಟಿಯವರ ನಿಧನಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ವಕೀಲರಾಗಿದ್ದು, ನ್ಯಾಯ, ಸತ್ಯದ ಪಾಲನೆ ಮತ್ತು ಬಡವರ ಬಗ್ಗೆ ಸಹಾನೂಭೂತಿ ಉಳ್ಳಂತಹ ಸೀತಾರಾಮ ಶೆಟ್ಟಿಯವರು ಯುವ ವಕೀಲರಿಗೆ ಮಾದರಿಯಾಗಿದ್ದರು ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಮಂಗಳೂರಿನ ವಾಸ್ ಲೇನ್ ನಲ್ಲಿ ವಾಸವಾಗಿದ್ದ ಸೀತಾರಾಮ್ ಶೆಟ್ಟಿಯವರ ಅಗಲುವಿಕೆಯೊಂದಿಗೆ ವಕೀಲವೃತ್ತಿಯ ಮಹಾನ್ ಕೊಂಡಿಯೊಂದು ಕಳಚಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಮಂಗಳೂರಿನ ಹಿರಿಯ ವಕೀಲರಾದ ವೈಟಿ ಹೆಗ್ಡೆ, ಪುರುಷೋತ್ತಮ ಪೂಜಾರಿ ಹಾಗೂ ಸೀತಾರಾಮ್ ಶೆಟ್ಟಿಯವರು ವಕೀಲಲೋಕದ ತ್ರಿಮೂರ್ತಿಗಳಂತಿದ್ದರು ಎಂದು ಹೇಳಿದ ಶಾಸಕ ಕಾಮತ್, ಸೀತಾರಾಂ ಶೆಟ್ಟಿಯವರ ಕುಟುಂಬಕ್ಕೆ ಭಗವಂತ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.