ಕರಾವಳಿ

ಎಸ್ಸೆಸ್ಸೆಫ್‌ನಿಂದ ಈದ್ ಹಬ್ಬದ ಪ್ರಯುಕ್ತ ಯೆನೇಪೋಯ ಅಸ್ಪತ್ರೆಯ ರೋಗಿಗಳಿಗೆ ಊಟ ವಿತರಣೆ

Pinterest LinkedIn Tumblr

ಉಳ್ಳಾಲ. ಎಸ್ಸೆಸ್ಸೆಫ್ ಶಾಂತಿಭಾಗ್ ಶಾಖೆ ವತಿಯಿಂದ ಈದ್ ಹಬ್ಬದ ಪ್ರಯುಕ್ತ ದೇರಳಕಟ್ಟೆ ಯೆನೇಪೋಯ ಅಸ್ಪತ್ರೆಯ ಒಳ ರೋಗಿಗಳಿಗೆ ಮಧ್ಯಾಹ್ನದ ಊಟವನ್ನು ವಿತರಿಸಲಾಯಿತು.

ಎಸ್ಸೆಸ್ಸೆಫ್ ಶಾಂತಿಭಾಗ್ ಶಾಖೆ 7 ವರ್ಷಗಳಿಂದ ನಿರಂತರವಾಗಿ ಯೆನೇಪೊಯ ಅಸ್ಪತ್ರೆಯ ರೋಗಿಗಳಿಗೆ ಊಟ ವಿತರಿಸುತ್ತಾ ಬಂದಿದೆ.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ರೋಗಿಗಳಿಗೆ ಊಟ ವಿತರಿಸಿದರು.ನಂತರ ಮಾತನಾಡಿ ಅವರು ಯುವಕರು ಎಸ್ಸೆಸ್ಸೆಫ್ ಸಂಘಟನೆಗೆ ಸೇರಿಕೊಂಡು ಬಡವರಿಗೆ ಮಧ್ಯಾಹ್ನದ ಊಟ ವಿತರಿಸುವ ಮೂಲಕ ಈದ್ ಹಬ್ಬದ‌ ನಿಜವಾದ ಸಂದೇಶವನ್ನು ಜನತೆಗೆ ತಿಳಿಸುವಂತಾಗಿದೆ. ಬಡವರ ಕಣ್ಣೀರು ಒರೆಸುವ ಕಾರ್ಯ ಯುವಕರಿಂದ ಪ್ರಾರಂಭ ವಾಗಬೇಕಾಗಿದೆ. ಎಸ್ಸೆಸ್ಸೆಫ್ ಸಂಘಟನೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸುವ ಮೂಲಕ ಬೇರೆ ಸಂಘನೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಸೈಯ್ಯದ್ ಖುಬೈಬ್ ತಂಙಳ್, ಉದ್ಯಮಿ ರಶೀದ್ ಹಾಜಿ, ಎಸ್ಸೆಸ್ಸೆಫ್ ಶಾಂತಿಭಾಗ್ ಗೌರವಾಧ್ಯಕ್ಷ  ಇಲ್ಯಾಸ್ ಸಖಾಫಿ, ಎಸ್ಸೆಸ್ಸೆಫ್ ಮುಖಂಡರಾದ ಅಲ್ತಾಫ್ ಕುಂಪಲ, ಜಾಫರ್ ಅಳೇಕಲ ಮುಂತಾದವರು ಉಪಸ್ಥಿತರಿದರು.

Comments are closed.