ರಾಷ್ಟ್ರೀಯ

ಆಂಧ್ರ ನಂತರ ಬಂಗಾಳಕ್ಕೆ ರಾಜಕೀಯ ‘ಚಾಣಕ್ಯ ಪ್ರಶಾಂತ್ ಕಿಶೋರ್​

Pinterest LinkedIn Tumblr


ನವದೆಹಲಿ: ಆಂಧ್ರಪ್ರದೇಶದ ನಂತರ ಪ್ರಶಾಂತ್​ ಕಿಶೋರ್​ ಪಶ್ಚಿಮಬಂಗಾಳದಲ್ಲಿ ಪ್ರಮುಖ ಪಾತ್ರ ವಹಿಸಲು ಸಜ್ಜಾಗಿದ್ದಾರೆ. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಗುರುವಾರ ಸತತ ಎರಡು ಗಂಟೆಗಳ ಕಾಲ ಕೋಲ್ಕತ್ತದಲ್ಲಿ ಪ್ರಶಾಂತ್ ಕಿಶೋರ್ ಅವರೊಂದಿಗೆ ವಿಧಾನಸಭೆ ಚುನಾವಣೆಯ ತಂತ್ರಗಾರಿಕೆ ಕುರಿತು ಮಾತುಕತೆ ನಡೆಸಿದ್ದಾರೆ.

ಮಮತಾ ಬ್ಯಾನರ್ಜಿ ಪರವಾಗಿ ಕೆಲಸ ಮಾಡಲು ಪ್ರಶಾಂತ್ ಕಿಶೋರ್ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೋಲ್ಕತ್ತದಲ್ಲಿ ಗುರುವಾರ ಇಬ್ಬರ ಸಭೆ ಬಳಿಕ ಬ್ಯಾನರ್ಜಿ ಅವರು ಕಿಶೋರ್ ಅವರ ಸೇವೆ ಬಳಸಿಕೊಳ್ಳಲು ಸಹಿ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಪ್ರಶಾಂತ್ ಕಿಶೋರ್ ಅವರು ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಗನ್​ಮೋಹನ್ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಆಡಳಿತಾರೂಢ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷದ ವಿರುದ್ಧ ಭರ್ಜರಿ ಬಹುಮತ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜಗನ್​ ಗೆಲುವಿಗಾಗಿ ಪ್ರಶಾಂತ್ ಕಿಶೋರ್​ ಎರಡು ವರ್ಷಗಳಿಂದ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದರು.

ಕಳೆದ ಚುನಾವಣೆಯಲ್ಲಿ ಬ್ಯಾನರ್ಜಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಿದ್ದರು. ಆದರೆ, ಈಗ ರಾಜಕೀಯ ಸನ್ನಿವೇಶ ಬದಲಾಗಿದೆ. ಈ ಸತ್ಯ ಮಮತಾ ಅವರಿಗೂ ಗೊತ್ತಿಲ್ಲದೇ ಏನಿಲ್ಲ. ಹೀಗಾಗಿ ರಾಜಕೀಯ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ್ ಕಿಶೋರ್ ಅವರ ರಾಜಕೀಯ ತಂತ್ರಗಾರಿಕೆ ಬಳಸಿಕೊಳ್ಳಲು ಬ್ಯಾನರ್ಜಿ ಮುಂದಾಗಿದ್ದಾರೆ ಎನ್ನಲಾಗಿದೆ.

ವಾಸ್ತವ ಏನೆಂದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 18 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿದೆ. ಹಲವು ಕ್ಷೇತ್ರಗಳಲ್ಲಿ ಬಹಳ ಕಡಿಮೆ ಅಂತರದಲ್ಲಿ ಸೋತಿರುವುದು ಬಂಗಾಳದ ಹಿಂಸಾಚಾರದ ರಾಜಕೀಯ ಬಹಳ ಕಾಲ ಉಳಿಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಟಿಎಂಸಿ ಮುಖ್ಯಂಡರೊಬ್ಬರು ಹೇಳುತ್ತಾರೆ.

ಭಾರತದ ರಾಜಕೀಯದಲ್ಲಿ ಚಾಣಕ್ಯ ಎಂದು ಹೆಸರು ಪಡೆದಿರುವ ಪ್ರಶಾಂತ್ ಕಿಶೋರ್ ಅವರು ಹಲವು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ದಾಖಲೆಗಳಿವೆ. ಇವರು ಬಿಜೆಪಿ ಮತ್ತು ಕಾಂಗ್ರೆಸ್​ ಜೊತೆಗೂ ಕೆಲಸ ಮಾಡಿದ್ದಾರೆ.

ಕಿಶೋರ್ ಅವರ ಮೊದಲ ಬಹುದೊಡ್ಡ ಪ್ರಚಾರ ಎಂದರೆ ಅದು 2011ರಲ್ಲಿ ಗುಜರಾತ್​ನಲ್ಲಿ ನರೇಂದ್ರ ಮೋದಿ ಅವರನ್ನು ಮೂರನೇ ಅವಧಿಗೆ ಗೆಲ್ಲಿಸಿದ್ದು. ಇದರ ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಭರ್ಜರಿ ಗೆಲುವಿಗೆ ಕಿಶೋರ್​ ವಹಿಸಿದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

2014ರಿಂದ ಕಿಶೋರ್ ಅವರು ಬಿಹಾರದಲ್ಲಿ ನಿತೀಶ್​ ಕುಮಾರ್ ಮತ್ತು ಪಂಜಾಬ್​ನಲ್ಲಿ ಅಮರಿಂದರ್ ಸಿಂಗ್​ ಅವರ ಗೆಲುವಿನಲ್ಲಿ ಸಹಾಯ ಮಾಡಿದ್ದರು.

Comments are closed.