ಕರಾವಳಿ

ಮಂಗಳೂರು ವಿಮಾನ ದುರಂತಕ್ಕೆ 9 ವರ್ಷ : ದುರಂತದಲ್ಲಿ ಮಡಿದವರಿಗೆ ಕೂಳೂರಿನಲ್ಲಿ ಶ್ರದ್ಧಾಂಜಲಿ

Pinterest LinkedIn Tumblr

ಮಂಗಳೂರು, ಮೇ 22: ಮಂಗಳೂರಿನ ಹೊರವಲಯದ ಬಜ್ಪೆ ಕೆಂಜಾರಿನಲ್ಲಿ ವಿಮಾನ ದುರಂತ ಸಂಭವಿಸಿ ಇಂದಿಗೆ (ಮೇ 22) 9 ವರ್ಷಗಳಾಗಿವೆ. 2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಬಜ್ಪೆ ಕೆಂಜಾರಿಗೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೆಂಜಾರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಸಂದರ್ಭ ಅವಘಡ ಸಂಭವಿಸಿ ವಿಮಾನದಲ್ಲಿದಲ್ಲಿದ್ದ 8 ಮಂದಿ ಸಿಬ್ಬಂದಿ ಸಹಿತ 166 ಮಂದಿಯ ಪೈಕಿ 158 ಮಂದಿ ಸುಟ್ಟುಕರಕಲಾಗಿದ್ದರು.

ಈ ವೇಳೆ ದುರಂತದಲ್ಲಿ ಮೃತಪಟ್ಟವರ ಗುರುತಿಸಲ್ಪಟ್ಟ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಆದರೆ ಗುರುತಿಸಲು ಸಾಧ್ಯವಾಗದ ಮೃತದೇಹಗಳನ್ನು ಕೂಳೂರು ಸಮೀಪದ ತಣ್ಣೀರು ಬಾವಿ ರಸ್ತೆಯ ತಿರುವಿನಲ್ಲಿ ನದಿಯ ಬದಿಯ ಉದ್ಯಾನವನದಲ್ಲಿ ಸಮಾದಿ ಮಾಡಲಾಗಿತ್ತು.

ದ.ಕ.ಜಿಲ್ಲಾಡಳಿತ, ನವಮಂಗಳೂರು ಬಂದರು ಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಮಂಗಳೂರು ವಿಮಾನ ದುರಂತದ ವಾರ್ಷಿಕ ಸ್ಮರಣಾರ್ಥ ಮಡಿದವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಇಂದು ಕೂಳೂರು ಸೇತುವೆ ಸಮೀಪ ಸಮಾದಿ ಮಾಡಲ್ಪಟ್ಟ ಉದ್ಯಾನವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್, ದ.ಕ.ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಮುರಳಿ ಮೋಹನ್ ಚೂಂತಾರ್, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ದ.ಕ.ಜಿ.ಪಂ. ಸಿಇಒ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಡಿಎಚ್‌ಒ ಡಾ. ರಾಮಕೃಷ್ಣರಾವ್, ಹಾಗೂ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.

ಕೂಳೂರು ಸಮೀಪದ ತಣ್ಣೀರು ಬಾವಿ ರಸ್ತೆಯ ತಿರುವಿನಲ್ಲಿ ನದಿಯ ಬದಿಯ ಉದ್ಯಾನವನದಲ್ಲಿ ಗುರುತಿಸಲು ಸಾಧ್ಯವಾಗದ ಮೃತದೇಹಗಳ ಸಮಾದಿ ( ಕಡತ ಚಿತ್ರ)

2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೆಂಜಾರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಸಂದರ್ಭ ಸಂಭವಿಸಿದ ಅವಘಡದ ಕೆಲವು ಚಿತ್ರಗಳು

2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೆಂಜಾರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಸಂದರ್ಭ ಸಂಭವಿಸಿದ ಅವಘಡದ ಕೆಲವು ಚಿತ್ರಗಳು

Comments are closed.