ಮಂಗಳೂರು : ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವರಿಗೆ ನೂತನ ಬಂಡಿ ವಾಹನ ಸಮರ್ಪಣಾ ಸಮಾರಂಭವು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಶುಭ ಆಶೀರ್ವಾದದೊಂದಿಗೆ ಶ್ರೀ ಕಾಶೀ ಮಠಾಧೀಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ತಾರೀಕು ಮೇ 13ರ ಬೆಳಗ್ಗೆ(ಸೋಮವಾರ) 7.10ರ ಶುಭ ಮುಹೂರ್ತದಲ್ಲಿ ಜರಗಿತು.
ನೂತನ ಬಂಡಿ ವಾಹನವನ್ನು ಗುರುಪುರ ಪೇಟೆ ಶೆಣೈ ಕುಟುಂಬದ ಪರವಾಗಿ ಗುರುಪುರ ಅರವಿಂದ ರಾವ್ ಮತ್ತು ಕುಟುಂಬ ಮುಂಬಯಿ,ಗುರುಪುರ ಲಕ್ಮ್ಷೀ ದೇವಿ ಮತ್ತು ಗುರುಪುರ ಗುಂಡ ಯಾನೆ ದಾಮೋದರ ಶೆಣೈ ಮಂಗಳೂರು ಇವರ ಸ್ಮರಣಾರ್ಥ ಶ್ರೀಮತಿ ಗುರುಪುರ ಲತಿಕಾ ಶೆಣೈ ಮತ್ತು ಸಿ.ಎ ಗುರುಪುರ ಹರಿರಾಮ ಶೆಣೈ ಮಂಗಳೂರು,ಶ್ರೀಮತಿ ಗುರುಪುರ ನೀನಾ ಶೆಣೈ ಮತ್ತು ಶ್ರೀ ಜಿ.ಜಿ ಗುರುಪುರ ಹರಿರಾಮ ಶೆಣೈ ಬೆಂಗಳೂರು ಇವರು ಸೇವಾರೂಪದಲ್ಲಿ ಸಮರ್ಪಿಸಿದರು .
ಚಿತ್ರ : ಮಂಜು ನೀರೇಶ್ವಾಲ್ಯ