ಕರಾವಳಿ

ಕದ್ರಿ ಬ್ರಹ್ಮಕಲಶಾಭಿಷೇಕ ಸಂಪನ್ನ – ಶ್ರೀ ಮಂಜುನಾಥ ದೇವರ ರಥಾರೋಹಣ – ಶ್ರೀ ಮನ್ಮಾಹಾರಥೋತ್ಸವ

Pinterest LinkedIn Tumblr

ಮಂಗಳೂರು, ಮೇ.10: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮೇ 2ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದ್ದ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕವು‌ ಗುರುವಾರ ಸಂಪನ್ನಗೊಂಡಿತಲ್ಲದೆ ಮಧ್ಯಾಹ್ನ ದೇವರು ರಥಾರೋಹಣಗೈದರು. ಸಂಜೆ ದೇವರ ರಥೋತ್ಸವ ಜರಗಿ ಮಹಾದಂಡ ಜೋಡನೆಗೈಯ್ಯಲಾಯಿತು.

ಕದ್ರಿ ಮಠಾಧಿಪತಿ ಶ್ರೀ ರಾಜಾ ನಿರ್ಮಲನಾಥ್ ಜಿ., ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ‌ಅಧ್ಯಕ್ಷಡಾ. ಎ. ಜನಾರ್ದನ ಶೆಟ್ಟಿ, ಗೌರವಾಧ್ಯಕ್ಷ, ವೇದವ್ಯಾಸಕಾಮತ್, ಕಾರ್ಯ ನಿರ್ವಹಣಾಧಿಕಾರಿ, ಡಾ. ನಿಂಗಯ್ಯ, ಪ್ರಚಾರ ಸಮಿತಿಯ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದರಾಘವೇಂದ್ರ ಭಟ್, ರಂಜನ್‌ಕುಮಾರ್ ಬಿ.ಎಸ್., ಶ್ರೀಮತಿ ಚಂದ್ರಕಲಾ ದೀಪಕ್, ಪುಷ್ಪಲತಾ ಶೆಟ್ಟಿ, ಹರಿನಾಥಜೋಗಿ, ದಿನೇಶ್‌ದೇವಾಡಿಗ, ಸುರೇಶ್‌ಕುಮಾರ್‌ಕದ್ರಿ, ಮಾಜಿ ಮೇಯರ್‌ಗಳಾದ ಭಾಸ್ಕರ ಮೊಯಿಲಿ ಶಶಿಧರ ಹೆಗ್ಡೆ, ಸಹಿತ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು ಹಾಗೂ ಭಕ್ತ ಸಮೂಹ ಈ ಸಂದರ್ಭ ಉಪಸ್ಥಿರಿದ್ದರು.

Comments are closed.