ಉಡುಪಿ: ಸಹೋದರಿ ಸಮಾನರಾದ ಸುಮಲತಾ ಗೆದ್ದು ಬಂದರೆ ರಾಜಕಾರಣದ ಗೌರವ ಹೆಚ್ಚಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ತಮ್ಮ ಅಧೀಕೃತ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು ಮಂಡ್ಯ ಎಂಬ ಗಂಡು ಮೆಟ್ಟಿದ ನೆಲದಲ್ಲಿ ಲೋಕಸಭೆಗೆ ಸ್ಪರ್ಧಿಸಿ ರಾಷ್ಟ್ರದ ಗಮನ ಸೆಳೆದ ತಂಗಿ ಸುಮಲತಾರನ್ನು ಭೇಟಿಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ತನ್ನನ್ನು ಎದುರಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಮೂರು ಸುಮಲತಾ ಸ್ಪರ್ಧೆ, ಹಣ ಹಂಚಿಕೆಯಲ್ಲಿ ಆಣೆ ಪ್ರಮಾಣದ ಅತಿರೇಕತೆ, ಜಿಲ್ಲಾ ಮಟ್ಟದ ಅಧಿಕಾರಿಗಳ ದುರ್ಬಳಕೆ, ರೇವಣ್ಣನ ವ್ಯಂಗ್ಯಭರಿತ ಮಾತು, ಪ್ರಚಾರ ಸಭೆಗಳಲ್ಲಿ ಪೊಲೀಸರ ಮೂಲಕ ಕೊಡುವ ಕಿರುಕುಳ, ಎಲ್ಲವನ್ನೂ ಸಹಿಸಿ ಇಡೀ ರಾಜ್ಯ ಸರಕಾರದ ಎದುರು ಮಹಿಳೆಯಾಗಿ ರಾಜಧರ್ಮದ ಹೋರಾಟ ಕೊಟ್ಟಿರುವುದನ್ನು ಸ್ಮರಿಸಿದರು.
ಯಾವುದೇ ಒಬ್ಬ ಅನುಭವಿ ರಾಜಕಾರಣಿಯನ್ನು ಮೀರಿನಿಂತ ಸುಮಲತಾರ ಪ್ರಬುದ್ಧತೆ, ತಾಳ್ಮೆ, ಸಹನೆ, ನಡವಳಿಕೆ ಗಮನಿಸಿದಾಗ ನಿಜಕ್ಕೂ ಸುಮಲತಾ ಅಂಬರೀಶ್ ಮಂಡ್ಯ ಮತದಾರರ ಹೃದಯ ಗೆದ್ದಿದ್ದಾರೆ ಅನಿಸಿತು ಎಂದಿದ್ದಾರೆ.
Comments are closed.