ಕರಾವಳಿ

ಐವತ್ತು ನಿಮಿಷ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್

Pinterest LinkedIn Tumblr

ಮಂಗಳೂರು, ಎಪ್ರಿಲ್.18 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ನಗರದ ಲೇಡಿಹೀಲ್ ಸರ್ಕಲ್ ಬಳಿಯಿರುವ ಸೈಂಟ್ ಅಲೋಶಿಯಸ್ ಇಂಗ್ಲೀಷ್ ಮಾಧ್ಯಮ ಹಿರಿಯ ಪ್ರಾಥಾಮಿಕ ಶಾಲೆ ಲೇಡಿಹಿಲ್ ಉರ್ವಾ ಇಲ್ಲಿಯ ದಕ್ಷಿಣ ವಿಭಾಗದ 90 ನೇ ನಂಬ್ರದ ಮತದಾನಕೇಂದ್ರದಲ್ಲಿ ಗುರುವಾರ ಬೆಳಗ್ಗೆ ಮತದಾನ ಮಾಡಿದರು

ಈ ಮತಗಟ್ಟೆಯಲ್ಲಿ ಮುಂಜಾನೆಯಿಂದಲೇ ಬಾರೀ ಸಂಖ್ಯೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಎಂಟು ಗಂಟೆಗೆ ಮತದಾನ ಕೇಂದ್ರಕ್ಕೆ ಬಂದ ನಳಿನ್ ಕುಮಾರ್ ಕಟೀಲ್ ಅವರು ಸುಮಾರು 50 ನಿಮಿಷ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ : ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಷ್ಟ್ರಮಾತೆ ಭಾರತ ಮಾತೆಯ ಗೌರವವನ್ನು ಹೆಚ್ಚಿಸುವಂತಹ ಚುನಾವಣೆ ಇದು. ವಿಶೇಷತೆ ಏನೆಂದರೆ ನಾನು ಹತ್ತಾರು ಚುನಾವಣೆಗಳಲ್ಲಿ ಮತದಾನವನ್ನು ಮಾಡಿದ್ದೇನೆ. ಹತ್ತಾರು ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಮೂರು ಚುನಾವಣೆಯಲ್ಲಿ ಸ್ಫರ್ಧಿಯಾಗಿದ್ದೇನೆ. ಆದರೆ ಯಾವೂದೇ ಚುನಾವಣೆಯಲ್ಲಿ ಈ ರೀತಿ ಬೆಳಿಗ್ಗೆ ಬೆಳಿಗ್ಗೆ ಬಂದು ಸ್ವಯಂಪ್ರೇರಿತವಾಗಿ ಮತದಾನ ಮಾಡುವುದಕ್ಕೆ ಸರತಿ ಸಾಲಿನಲ್ಲಿ ನಿಂತಿರುವುದನ್ನು ಇದೇ ಮೊದಲು ಕಾಣುತ್ತಿದ್ದೇನೆ.

ಎಲ್ಲಾ ಮತಗಟ್ಟೆಗಳಲ್ಲಿ ಈ ರೀತಿಯ ವಾತಾವರಣವನ್ನು ಕಾಣುತ್ತಿದ್ದೇನೆ. ಎಲ್ಲಾ ಕಡೆಗಳಲ್ಲಿ ಜನರು ಮತದಾನ ಮಾಡುವ ಮೂಲಕ ವೈಭವದ ಉತ್ಸವ ಆಚರಣೆ ಮಾಡುತ್ತಿರುವುದನ್ನು ಕಾಣುತ್ತಿದ್ದೇನೆ. ಹಾಗಾಗಿ ನಿಜವಾಗಿ ಇದೊಂದು ಪ್ರಜಾಪ್ರಭುತ್ವ ಉತ್ಸವವಾಗಿದೆ. ಈಗಾಗಲೇ ನಾನು ನನ್ನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದೇನೆ. ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

Comments are closed.