ಕರಾವಳಿ

ಮೋದಿ ಕಾರ್ಯಕ್ರಮ ಹಿನ್ನೆಲೆ : ಲೇಡಿಹಿಲ್‌ ಸ್ನೇಹ ಅಟೋ ಪಾರ್ಕ್‌ ಚಾಲಕ ಮಾಲಕರಿಂದ ಪ್ರಚಾರ ಅಭಿಯಾನ

Pinterest LinkedIn Tumblr

ಮಂಗಳೂರು, ಎಪ್ರಿಲ್.11 : ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಎಪ್ರಿಲ್ 13ರಂದು ಮಂಗಳೂರಿಗೆ ಆಗಮಿಸಿ ನಗರದ ಕೇಂದ್ರ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಹಿನ್ನೆಲೆಯಲ್ಲಿ ಲೇಡಿಹಿಲ್‌ನ ಸ್ನೇಹ ಅಟೋ ಪಾರ್ಕ್‌ನ ಚಾಲಕರು ಹಾಗೂ ರಿಕ್ಷಾ ಮಾಲ್ಹಕರು ಗುರುವಾರ ಬೆಳಗ್ಗೆ ನಗರದ ವಿವಿಧ ಅಟೋ ಪಾರ್ಕ್ ಗಳಿಗೆ ತೆರಳಿ ಆಟೋ ಚಾಲಕರು ಮತ್ತು ಮಾಲಕರಿಗೆ ಮೋದಿ ಕಾರ್ಯಕ್ರಮದ ಕರಪತ್ರ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪ್ರಚಾರ ಕಾರ್ಯಕ್ಕೆ ಇಂದು ಬೆಳಗ್ಗೆ ಲೇಡಿಹಿಲ್‌ನ ಸ್ನೇಹ ಅಟೋ ಪಾರ್ಕ್‌ನಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಸ್ನೇಹ ಅಟೋ ಪಾರ್ಕ್‌ನ ಅಧ್ಯಕ್ಷರಾದ ದೇವದಾಸ್ ಬಜಿಲಕೇರಿ, ಪದಾಧಿಕಾರಿಗಳಾ ರಾಜೇಶ್ ಶೆಟ್ಟಿ, ಭರತ್ ಚಿಲಿಂಬಿ, ರವಿಚಂದ್ರ ಶೆಟ್ಟಿ, ಗಂಗಾಧರ್ ಚಿಲಿಂಬಿ, ಶೇಷಗಿರಿ, ಕರುಣಾಕರ್, ದಿವಾಕರ್, ಹೇಮಂತ್, ಪುರುಷೋತ್ತಮ್, ಜನಾರ್ಧನ, ವಿಜಯ ಉರ್ವಾ, ಅಮರ್ ನಾಥ್ ಶೆಟ್ಟಿ, ಸುನೀಲ್ ಬೋಳೂರು, ಪ್ರಶಾಂತ್ ಉರ್ವಾ, ಸಂದೀಪ್ ಬೊಕ್ಕಪಟ್ಣ, ಕಿಶೋರ್‍ ವೆಲೆನ್ಸಿಯಾ ಮುಂತಾದವರು ಉಪಸ್ಥಿತರಿದ್ದರು.

ನಗರದ ಲೇಡಿಹಿಲ್, ಉರ್ವಾ, ಬಿಜೈ ಆನೆಗುಂಡಿ, ಉರ್ವಾಸ್ಟೋರ್, ಕೊಟ್ಟಾರ ಚೌಕಿ, ಕೊಟ್ಟಾರ, ಉರ್ವಾ ಮಾರಿಗುಡಿ, ಆಶೋಕನಗರ, ಮಣ್ಣಗುಡ್ಡ ಗುರ್ಜಿ, ಕೆ‍ಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಲಾಲ್‌ಭಾಗ್, ಪಿವಿಎಸ್ ಸರ್ಕಲ್, ಬೊಕ್ಕಪಟ್ಣ, ಕೊಟ್ಟಾರ ಕ್ರಾಸ್, ಕುಂಟಿಕಾನ, ಎ.ಜೆ.ಪಾರ್ಕ್, ಕೊಂಚಾಡಿ, ಸುಲ್ತಾನ್ ಬತ್ತೇರಿ ಮುಂತಾದ ಆಟೋ ಪಾರ್ಕ್‌ಗಳಿಗೆ ತೆರಳಿ ಮೋದಿ ಕಾರ್ಯಕ್ರಮದ ಬಗ್ಗೆ ಪ್ರಚಾರ ನಡೆಸಿದರು.

Comments are closed.