ಕರಾವಳಿ

ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಡೆಯಿತು ಪ್ರೇಮಿಗಳ ಮದುವೆ

Pinterest LinkedIn Tumblr

ಕುಂದಾಪುರ: ಪರಸ್ಪರ ಪ್ರೀತಿಸುತ್ತಿದ್ದ ಕೋಟೇಶ್ವರ ಮಾರ್ಕೋಡಿನ ರಾಮ ಪೂಜಾರಿ ಅವರ ಪುತ್ರ ಶ್ರೀಕಾಂತ ಪೂಜಾರಿ ಹಾಗೂ ಗಂಗೊಳ್ಳಿಯ ನರಸಿಂಹ ಖಾರ್ವಿ ಅವರ ಪುತ್ರಿ ಶಾಲಿನಿ ಖಾರ್ವಿ ಅವರನ್ನು ಕರೆಯಿಸಿ ಪೋಷಕರ ಸಮ್ಮುಖ ಕುಂದಾಪುರದಲ್ಲಿನ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಮಂಗಳವಾರ ಮದುವೆ ಮಾಡಿಸಲಾಯಿತು.

ಹಲವು ಸಮಯಗಳಿಂದ ಪ್ರೀತಿಸುತ್ತಿದ್ದ ಜೋಡಿ ಮನೆಯವರ ವಿರೋಧದ ಹಿನ್ನೆಲೆ ಕುಂದಾಪುರ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರಾಧಾದಾಸ್ ಬಳಿ ಆಗಮಿಸಿ ಕೇಂದ್ರಕ್ಕೆ ವಿವಾಹ ಮಾಡಿಸುವಂತೆ ಮನವಿ ನೀಡಿದ್ದರು. ಅದರಂತೆಯೇ ರಾಧಾದಾಸ್ ಅವರು ಎರಡು ಮನೆಯವರ ಬಳಿ ಮಾತುಕತೆ ನಡೆಸಿ ಮಂಗಳವಾರ ಮದುವೆ ಮಾಡಿಸಿದ್ದಾರೆ. ಯುವತಿ ತಂದೆ, ಸಹೋದರ ಹಾಗೂ ಬಂಧುಗಳು, ಯುವಕನ ತಾಯಿ ಹಾಗೂ ಬಂಧುಗಳು ಈ ಸಂದರ್ಭ ಉಪಸ್ಥಿತರಿದ್ದರು. ಮಾರ್ಕೋಡು ಸುಬ್ಬಣ್ಣ ಶೆಟ್ಟಿ, ಮಹಿಳಾ ಸಾಂತ್ವಾನ ಕೇಂದ್ರದ ಸಿಬ್ಬಂದಿಗಳು ಇದ್ದರು.

Comments are closed.