ಕರಾವಳಿ

ಅಮೃತಾನಂದಮಯಿ ಮಠದ ವತಿಯಿಂದ ಬೆಂಗರೆ ಸಮುದ್ರ ತೀರದಲ್ಲಿ ಸ್ವಚ್ಛ ಭಾರತ ಅಭಿಯಾನ

Pinterest LinkedIn Tumblr

ಮಂಗಳೂರು ; ಮಾತಾ ಅಮೃತಾನಂದಮಯಿ ಮಠದ ಅಮಲ ಭಾರತ – ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ನಗರದ ಬೆಂಗ್ರೆ ಸಮುದ್ರ ತೀರ ಹಾಗೂ ಬೆಂಗರೆ ಪಾರ್ಕ್ ಬಳಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಸ್ವಚ್ಛತಾ ಜನ ಜಾಗೃತಿ ಮಹಾಯಜ್ಞದ ಈ ಸೇವಾ ಕಾರ್ಯಕ್ರಮಕ್ಕೆ ಸಮಾಜ ಸೇವಕ ಮಾಧವ ಸುವರ್ಣ ಅವರು ಚಾಲನೆ ನೀಡಿದರು. ಪಾರ್ಕ್ ನಲ್ಲಿ , ಪಾರ್ಕ್ ನ ಸುತ್ತ ಮುತ್ತ ಹಾಗೂ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನ ನೆರವೇರಿತು.

ಮಠದ ಆಯುಧ್ ಸದಸ್ಯರು, ರೋಟರಿ ಸಮುದಾಯದಳ ಬೆಂಗ್ರೆ ಸದಸ್ಯರು ಹಾಗೂ ತೋಟ ಬೆಂಗ್ರೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಠದ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರಾಜ್ ಕಾಂಚನ್, ರೋಟರಿ ಸಮುದಾಯದಳದ ಸಂಜಯ್, ಲೋಕೇಶ್, ರಾಕೇಶ್, ಬಿಪಿನ್, ಶಾಲಾ ಶಿಕ್ಷಕಿ ಸುಮಾ ಉಪಸ್ಥಿತರಿದ್ದರು

Comments are closed.