ಕರಾವಳಿ

ದೇಶದ ಎಲ್ಲಾ ಪ್ರಜೆಗಳು ದೇಶ ರಕ್ಷಣೆಗಾಗಿ, ಅಭಿವೃದ್ಧಿಗಾಗಿ ಚೌಕಿದಾರರಾಗಬೇಕು ; ಪ್ರಧಾನಿ ಮೋದಿ ಕರೆ

Pinterest LinkedIn Tumblr

ಮಂಗಳೂರಿನಲ್ಲೂ ನಾನು ಚೌಕಿದಾರ ವೀಡಿಯೋ ಕಾನ್ಫರೆನ್ಸ್ ನೇರ ಪ್ರಸಾರ ಕಾರ್ಯಕ್ರಮ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ದೆಹಲಿಯ ಟಕೋತಾರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ನಾನು ಚೌಕಿದಾರ ಸಂವಾದ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಭಾರತೀಯ ಜನತಾ ಪಾರ್ಟಿ ವತಿಯಿಂದ ಮಂಗಳೂರಿನಲ್ಲೂ ವ್ಯವಸ್ಥೆ ಮಾಡಲಾಗಿತ್ತು.

ಮಂಗಳೂರಿನ ಬಂಟ್ಸ್ ಹಾಸ್ಟೇಲ್ ಸಮೀಪವಿರುವ ಬಿಜೆಪಿ ಲೋಕಸಭಾ ಚುಣಾವಣಾ ಕಚೇರಿಯ ಆವರಣದಲ್ಲಿ ಆಯೋಜಿಸಲಾದ ‘ನಾನು ಚೌಕಿದಾರ’ ನೇರ ಪ್ರಸಾರ ಕಾರ್ಯಕ್ರಮಕ್ಕೆ ಮಂಗಳೂರು ಲೋಕ ಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಸಂಚಾಲಕರಾದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಚಾಲನೆ ನೀಡಿದರು.

ಕೇಸರಿ ಹಾಗೂ ಗುಲಾಬಿ ಬಣ್ಣದ ಪೇಟ ಧರಿಸಿದ್ದ ಪುರುಷರು ಮತ್ತು ಮಹಿಳೆಯರ ನಾನು ಚೌಕಿದಾರ ಎನ್ನುವ ಹೆಸರಿನ ಬಟ್ಟೆಯನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇಶದ ವಿವಿಧ ಕಡೆಗಳಲ್ಲಿ ಮೋದಿಯನ್ನು ಬೆಂಬಲಿಸುವ ಚೌಕಿದಾರರನ್ನುದ್ದೇಶಿಸಿ ಮೋದಿ ವೀಡಿಯೋ ಕಾನ್ಫರನ್ಸ್ ಮೂಲಕ ನಿಗದಿತ ಕೇಂದ್ರಗಳ ಕಾರ್ಯಕರ್ತರ ಜೊತೆ ಸಂವಾದ ನಡೆಸಿದರು.

ನಗರದಲ್ಲಿ ವೀಡಿಯೋ ಕಾನ್ಫರೆನ್ಸ್ ನಲ್ಲಿ ನೇರವಾಗಿ ಭಾಗವಹಿಸಲು ಅವಕಾಶ ವಿರಲಿಲ್ಲ. ರಾಜ್ಯದ ಬೆಂಗಳೂರಿನ ಚೌಕಿದಾರ್ ಪ್ರತಿನಿಧಿಗಳು ಪ್ರಧಾನಿ ಜೊತೆ ಸಂವಾದ ನಡೆಸಿದರು. ದೇಶದ ಎಲ್ಲಾ ಪ್ರಜೆಗಳು ದೇಶ ರಕ್ಷಣೆಗಾಗಿ ಅಭಿವೃದ್ಧಿಗಾಗಿ ಚೌಕಿದಾರರಾಗಬೇಕು ಎಂದು ಮೋದಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ಪ್ರತಾಪ ಸಿಂಹ ನಾಯಕ್, ಸುದರ್ಶನ ಮೂಡಬಿದಿರೆ, ಭಾಸ್ಕರ್ ಚಂದ್ರ ಶೆಟ್ಟಿ, ಸಂಜಯ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Comments are closed.