ಕರಾವಳಿ

ಯುವ ಮತದಾರರು ತಾವು ಮತದಾನ ಮಾಡುವುದರೊಂದಿಗೆ ಎಲ್ಲರನ್ನೂ ಪ್ರೋತ್ಸಾಹಿಸಿ

Pinterest LinkedIn Tumblr

ಮಂಗಳೂರು : ಮತದಾನದ ಜಾಗೃತಿ ಮೂಡಿಸಲು ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ನಿರ್ಣಯದಂತೆ ದ.ಕ. ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ರವಿವಾರ ಮ್ಯಾರಾಥಾನ್ ಸ್ಪರ್ಧೆ ನಡೆಯಿತು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಮತದಾನಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ 16 ವರ್ಷದೊಳಗಿನ ಹಾಗೂ 16 ವರ್ಷ ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾದ ಈ ಮ್ಯಾರಥಾನ್ ಸ್ಫರ್ಧೆಗೆ ನಗರದ ಮಂಗಳಾ ಸ್ಟೇಡಿಯಂನಲ್ಲಿ ಅಧಿಕಾರಿಗಳು, ಕ್ರೀಡಾಳುಗಳು, ನಾಗರಿಕರು ಸಾಥ್ ನೀಡಿದರು.

ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್, ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಎಸ್ಪಿ ಲಕ್ಷ್ಮೀಪ್ರಸಾದ್, ಸಿಇಒ ಹಾಗೂ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಡಾ ಸೆಲ್ವಮಣಿ ಆರ್. ಮತ್ತಿತರರು ಮತದಾನ ನಮ್ಮ ಹಕ್ಕು, ಕರ್ತವ್ಯ. ಪ್ರಜ್ರಾಭುತ್ವದ ಯಶಸ್ಸಿಗೆ ಮತದಾನ ಮಾಡಿ. ಯುವ ಮತದಾರರು ತಾವು ಮತದಾನ ಮಾಡುವುದರೊಂದಿಗೆ ಎಲ್ಲರನ್ನೂ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.

ಈ ಸಂದರ್ಭ ಮೂರು ವಿಭಾಗದಲ್ಲಿ ಸ್ಫರ್ಧೆ ನಡೆಯಿತು. 16 ವರ್ಷದೊಳಗಿನ ಬಾಲಕ ಬಾಲಕಿಯರ ಮ್ಯಾರಾಥಾನ್ ಮಂಗಳೂರಿನ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡೆ ರಸ್ತೆ, ನ್ಯೂಚಿತ್ರಾ, ರಥಬೀದಿ, ಮಂಗಳೂರು ಸೆಂಟ್ರಲ್ ಮಾರ್ಕೆಟ್, ಹಂಪನಕಟ್ಟೆ ರಸ್ತೆ ಮೂಲಕ ಸಾಗಿ ಪಿವಿಎಸ್ ವೃತ್ತ, ಬಳ್ಳಾಲ್‌ಬಾಗ್, ಲಾಲ್‌ಬಾಗ್, ದಿವ್ಯದೀಪ ಟವರ್ಸ್ ಮುಂಭಾಗದಲ್ಲಿ ತಿರುಗಿ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು.

16 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳ ಮ್ಯಾರಾಥಾನ್ ಮಂಗಳೂರಿನ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡ ರಸ್ತೆ, ನ್ಯೂಚಿತ್ರಾ, ರಥಬೀದಿ, ಶರವು ದೇವಸ್ಥನ ರಸ್ತೆ, ಕಾರ್ನಾಡ್ ಸದಾಶಿವ ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್ ವೃತ್ತ, ಸಲ್ಮಾ ಆರ್ಕೆಡ್, ಕದ್ರಿ ದೇವಸ್ಥಾನ ರಸ್ತೆ, ಬಿಜೈ, ಕೆಎಸ್ಸಾರ್ಟಿಸಿ, ಲಾಲ್‌ಬಾಗ್ ವೃತ್ತದಿಂದ ಯೂಟರ್ನ್ ಪಡೆದು ಪಂಚಮಿ ಕಾಂಪ್ಲೆಕ್ಸ್, ಕಾಪಿಕಾಡು, ದಡ್ಡಲಕಾಡು, ಉರ್ವಾಸ್ಟೋರ್, ಅಶೋಕ್ ನಗರ, ಉರ್ವಾಮಾರ್ಕೆಟ್, ಲೇಡಿಹಿಲ್ ಮೂಲಕ ಹಾದು ಮಂಗಳಾ ಕ್ರೀಡಾಂಗಣ ತಲುಪಿತು.

“ಮತದಾನದ ಕಡೆಗೆ ನಮ್ಮ ನಡಿಗೆ” ಮಂಗಳಾ ಕ್ರೀಡಾಂಗಣದಿಂದ ಆರಂಭಗೊಂಡು ಮಣ್ಣಗುಡ್ಡೆ, ಬಳ್ಳಾಲ್‌ಬಾಗ್, ಲಾಲ್‌ಬಾಗ್, ಲೇಡಿಹಿಲ್ ಸಾಗಿ ಮಂಗಳಾ ಕ್ರೀಡಾಂಗಣ ತಲುಪಿತು.

ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳನ್ನು ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಮೊದಲ ವಿಭಾಗದಲ್ಲಿ 16 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಥಮ ಬಹುಮಾನ ಲಕ್ಷ್ಮಣ ಡಿ.ವೈ.ಇ.ಸಿ, ದ್ವಿತೀಯ ಬಹುಮಾನ ಕೆ. ಹನುಮೇಶ ಆಳ್ವಾಸ್, ತೃತೀಯ ಬಹುಮಾನ ಬಸವರಾಜ್ ಗೋಡಿ, ಚತುರ್ಥ ಬಹುಮಾನ ಪ್ರಶಾಂತ್ ಕುಮಾರ್ ಆಳ್ವಾಸ್, 5ನೇ ಬಹುಮಾನ ಸಚಿನ್ ಮಂಗಳೂರು ಪಡೆದುಕೊಂಡರು..

16 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಚೈತ್ರಾ ದೇವಾಡಿಗ ಆಳ್ವಾಸ್, ದ್ವಿತೀಯ ಬಹುಮಾನ ಪ್ರೀಯಾ ಡಿ ಆಳ್ವಾಸ್, ತೃತೀಯ ಬಹುಮಾನ ಪ್ರಿಯಾಂಕ ಎಚ್.ಡಿ ಆಳ್ವಾಸ್, ಚತುರ್ಥ ಬಹುಮಾನ ದೀಕ್ಷಾ ಬಿ ಆಳ್ವಾಸ್, 5ನೇ ಬಹುಮಾನ ಚೈತ್ರಾ ಪಿ. ಆಳ್ವಾಸ್ ಪಡೆದುಕೊಂಡರು.

2ನೇ ವಿಭಾಗದಲ್ಲಿ 16 ವರ್ಷಕ್ಕಿಂತ ಕೆಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ ಅಂಜುಮಾನ್, ದ್ವಿತೀಯ ಬಹುಮಾನ ಧರ್ಮಪ್ಪ ಬಿ. ಆಳ್ವಾಸ್, ತೃತೀಯ ಬಹುಮಾನ ದಶರತ್ ಆಳ್ವಾಸ್ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಚೈತ್ರಾ ಎನ್.ಸಿ. ಆಳ್ವಾಸ್, ದ್ವಿತೀಯ ಬಹುಮಾನ ವಿಂಧ್ಯಾ ಎನ್. ಆಳ್ವಾಸ್, ತೃತೀಯ ಬಹುಮಾನ ಪ್ರಣಮ್ಯ ಎನ್. ಆಳ್ವಾಸ್ ಪಡೆದುಕೊಂಡರು.

ಸಹಾಯಕ ಚುನಾವಣಾಧಿಕಾರಿ ಗಾಯತ್ರಿ ನಾಯಕ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಜಿಲ್ಲಾ ಯುವ ಸಮನ್ವಯ ಅಧಿಕಾರಿ ರಘವೀರ್, ಜಿಲ್ಲಾ ಸ್ವೀಪ್ ಸಮಿತಿಯ ಕಾರ್ಯದರ್ಶಿ ಸುಧಾಕರ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಪಾಲ್ಗೊಂಡರು.

Comments are closed.