ಕರಾವಳಿ

ಕುಖ್ಯಾತ ಗಾಂಜಾ ಮಾರಾಟಗಾರ ಹಾಗೂ ಗಾಂಜಾ ವ್ಯಸನಿಯ ಬಂಧನ :1 ಕೆ.ಜಿಗೂ ಅಧಿಕ ಗಾಂಜಾ ವಶ

Pinterest LinkedIn Tumblr

ಮಂಗಳೂರು : ಪಣಂಬೂರ್ ಸಮೀಪದ ತಣ್ಣೀರ್ ಬಾವಿ ಪ್ರದೇಶದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕುಖ್ಯಾತ ಗಾಂಜಾ ವ್ಯಸನಿಯನ್ನು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕಸಬಾ ಬೆಂಗ್ರೆ ನಿವಾಸಿ ಅಜೀಜ್ ಯಾನೆ ಮೊಹಮ್ಮದ್ ಅಜೀಜ್ ಯಾನೆ ಸ್ವಾಮಿ ಅಜೀಜ್ (43) ಬಂಧಿತ ಆರೋಪಿ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಸರಹದ್ದಿನ ತಣ್ಣೀರು ಬಾವಿ ರಫ್ತಾರ್ ಆಯಿಲ್ ಶೇಖರಾಣಾ ಘಟಕದ ಬಳಿಯಲ್ಲಿ ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದ ಆಯಿಲ್ ಟ್ಯಾಂಕರ್ ಗಳ ಮರೆಯಲ್ಲಿ ನಿಂತು ಗಿರಾಕಿಗಳಿಗೆ ಮಾರಾಟ ಮಾಡುವ ಸಲುವಾಗಿ ನಿಂತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿ ಬಳಿಯಿದ್ದ 1 ಕೆ.ಜಿ. 280 ಗ್ರಾಂ. ಗಾಂಜಾ (ಅಂದಾಜು ಮೌಲ್ಯ ರೂ: 25000/) ವನ್ನು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.

ಈತನ ಮತ್ತು ಈತನ ಪತ್ನಿಯ ವಿರುಧ್ದ ಈಗಾಗಲೇ ಪಣಂಬೂರು ಮತ್ತು ಮಂಗಳೂರು ನಗರದ ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟದ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐ.ಪಿ.ಎಸ್. ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಹನುಮಂತರಾಯ ಐ.ಪಿ.ಎಸ್. (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಶ್ರೀಮತಿ ಉಮಾ ಪ್ರಶಾಂತ್ (ಅಪರಾಧ ಮತ್ತು ಸಂಚಾರ) ಇವರ ಮಾರ್ಗದರ್ಶನದಂತೆ ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಆರ್. ಗೌಡ ಇವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕರಾದ ಸತ್ಯನಾರಾಯಣ, ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ಉಪ ನಿರೀಕ್ಷಕ ರಾದ ಶೀತಲ್ ಅಲಗೂರು, ರೌಡಿ‌ನಿಗ್ರಹ ದಳದ ಎ.ಎಸ್. ಐ. ಮೊಹಮ್ಮದ್, ಕುಶಲ ಮಣಿಯಾಣಿ, ತೀಶ್ ಎಂ. ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಮತ್ತು ಪಣಂಬೂರು ಠಾಣಾ ಪೊಲೀಸರು ಪಾಲ್ಗೊಂಡಿದ್ದರು.

Comments are closed.