ಮಂಗಳೂರು ಮಾರ್ಚ್ 26 : ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ, ಇಂದು ಪಕ್ಷೇತರ ಪಕ್ಷದಿಂದ ಮಹಮ್ಮದ್ ಖಾಲೀದ್, ಬಿ.ಜೆ.ಪಿ ಪಕ್ಷದಿಂದ ನಳಿನ್ ಕುಮಾರ್ ಕಟೀಲ್ (2), ಬಿ.ಜೆ.ಪಿ ಪಕ್ಷದಿಂದ ಸುದರ್ಶನ (2), ಪಕ್ಷೇತರ ಪಕ್ಷದಿಂದ ಡೊಮಿನಿಕ್ ಅಲೆಗ್ಸಾಂಡರ್ ಡಿಸೋಜಾ, ಪಕ್ಷೇತರ ಪಕ್ಷದಿಂದ ವೆಂಕಟೇಶ್ ಬೆಂಡೆ, ಬಿ.ಎಸ್.ಪಿ ಪಕ್ಷದಿಂದ ಸತೀಶ್ ಸಾಲ್ಯಾನ್, ಪಕ್ಷೇತರ ಪಕ್ಷದಿಂದ ಅಬ್ದುಲ್ ಹಮೀದ್, ಪಕ್ಷೇತರ ಪಕ್ಷದಿಂದ ಸುರೇಶ್ ಪೂಜಾರಿ ಹೆಚ್ (2), ಹಿಂದುಸ್ಥಾನ ಜನತಾಪಾರ್ಟಿಯಿಂದ ಸುಪ್ರೀತ್ ಕುಮಾರ್ ಪೂಜಾರಿ, ಅವರು ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿದ್ದು ಲೋಕ ತಾಂತ್ರಿಕ ಜನತಾದಳದಿಂದ ಸುಪ್ರೀತ್ ಕುಮಾರ್ ಪೂಜಾರಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿಜಯ ಶ್ರೀನಿವಾಸ ಸಿ, ಪಕ್ಷೇತರ ಪಾರ್ಟಿಯಿಂದ ಡಾ. ದೀಪಕ್ ರಾಜೇಶ್ ಕುವೆಲ್ಲೊ , ಬಿ.ಜೆ.ಪಿ ಪಕ್ಷದಿಂದ ನಳಿನ್ ಕುಮಾರ್ ಕಟೀಲ್ (2), ಪಕ್ಷೇತರ ಪಕ್ಷದಿಂದ ಮ್ಯಾಕ್ಸಿಂ ಪಿಂಟೋ, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಮಹಮ್ಮದ್ ಇಲಿಯಾಸ್, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಇಸ್ಮಾಯಿಲ್ ಶಾಫಿ ಕೆ, ಕಾಂಗ್ರೆಸ್ ಪಕ್ಷದಿಂದ ಮಿಥುನ್ ರೈ (4), ಅವರು ನಾಮಪತ್ರ ಸಲ್ಲಿಸಿರುತ್ತಾರೆ.
Comments are closed.